ಕಮಿಷನ್‌ ಕಾರಣಕ್ಕಾಗಿ ಗುತ್ತಿಗೆದಾರರ ಬಾಕಿ ಹಣ ನೀಡದ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಕಿ ಹಣ ಪಾವತಿಸಿ, ಗುತ್ತಿಗೆದಾರರ ಪ್ರಾಣ ಉಳಿಸಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.

- Advertisement - 

60 ಪರ್ಸೆಂಟ್‌ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೆ ಇಂತಿಷ್ಟು ಕಮಿಷನ್‌ಕೊಡಲೇಬೇಕು. ಪರ್ಸಂಟೇಜ್‌ವ್ಯವಹಾರ ಇಲ್ಲದೇ ಯಾವುದೇ ಬಾಕಿ ಹಣ ಬಿಡುಗಡೆಯಾಗುವುದಿಲ್ಲ. ಇದೇ ಕಾರಣಕ್ಕೆ “60 ಪರ್ಸೆಂಟ್‌ಕಾಂಗ್ರೆಸ್‌” ಸರ್ಕಾರ ಗುತ್ತಿಗೆದಾರರಿಗೆ 30,000 ಕೋಟಿ ಬಾಕಿ ಹಣವನ್ನು ಪಾವತಿಸದೆ ಸತಾಯಿಸುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.  

- Advertisement - 

ಸಾಲ-ಸೋಲ ಮಾಡಿ ಟೆಂಡರ್‌ಪಡೆದು ಕಾಮಗಾರಿ ಮಾಡಿರುವ ಕಾಂಟ್ರ್ಯಾಕ್ಟರ್‌ಗಳು ಬಾಕಿ ಹಣಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತಿದ್ದು, 6 ಸಚಿವರಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ.

ಹಣ ಪಾವತಿಸದೆ ಗುತ್ತಿಗೆದಾರರ ಬಲಿ ಪಡೆಯುತ್ತಿರುವ ಸರ್ಕಾರ ತಕ್ಷಣ ಬಾಕಿ ಹಣ ಪಾವತಿಸಬೇಕಿದೆ ಎಂದು ಜೆಡಿಎಸ್ ಆಗ್ರಹ ಮಾಡಿದೆ.

- Advertisement - 

 

Share This Article
error: Content is protected !!
";