ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದಿಂದ ಅಶಾಂತಿ ಸೃಷ್ಠಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದ ಅತಿರೇಕ ರಾಜ್ಯದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.  

 ಹಿಜಾಬ್‌ವಿಚಾರದಲ್ಲಿ ಬೀದಿಗೆ ಇಳಿದು ಪ್ರತಿಭಟಿಸಿ, ರೋಷಾವೇಶ ತೋರಿದ್ದ ಕಾಂಗ್ರೆಸ್‌ನಾಯಕರು, ಜನಿವಾರ ವಿಚಾರದಲ್ಲಿ ಮೌನಕ್ಕೆ ಜಾರಿದ್ದಾರೆ.

ಹಿಜಾಬ್‌ವಿಷಯದಲ್ಲಿ ಅನ್ವಿಯಿಸುವ ಧಾರ್ಮಿಕ ಸ್ವಾತಂತ್ರ್ಯ, ಹಿಂದೂಗಳ ಧಾರ್ಮಿಕ ನಂಬಿಕೆಯ ಜನಿವಾರಕ್ಕೆ ಅನ್ವಿಯಿಸುವುದಿಲ್ಲವೇ ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಸಿದ್ದರಾಮಯ್ಯ ಅವರೇ, ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ತೆಗೆಸಿರುವ, ತೆಗೆಯುವಂತೆ ಉದ್ಘಟತನ ತೋರಿರುವ ಘಟನೆಗಳು ಬ್ರಾಹ್ಮಣ ಸಮುದಾಯಕ್ಕೆ ಮಾಡಿರುವ ಅವಮಾನ ಎಂದು ಟೀಕಿಸಿದೆ.

ಹಿಜಾಬ್‌ವಿಚಾರದಲ್ಲಿ ಕಾಂಗ್ರೆಸ್‌ಪಕ್ಷ ಮುಂಚೂಣಿಯಲ್ಲಿತ್ತು. ಆದರೆ ಬ್ರಾಹ್ಮಣರಿಗೆ ಅಪಮಾನವಾದಾಗ ಎಲ್ಲರೂ ಸುಮ್ಮನಿರುವುದು ಆಶ್ಚರ್ಯ ತಂದಿದೆ” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಂಕರ ಗುಹಾ ಅಸಮಾಧಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್‌ಪಕ್ಷದ ಓಲೈಕೆ ರಾಜಕಾರಣ ಮತ್ತು ಇಬ್ಭಗೆ ನೀತಿಯನ್ನು ಪ್ರದರ್ಶಿಸುತ್ತಿದೆ ಎಂದು ಜೆಡಿಎಸ್ ದೂರಿದೆ.

 

 

Share This Article
error: Content is protected !!
";