ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಲೆ ಏರಿಸಿ ಜನರಿಗೆ ಬರೆ ಹಾಕುತ್ತಿರುವ ದುಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಕುಡಿಯುವ ನೀರಿನ ದರ ಹೆಚ್ಚಿಸಿ ಬಡ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಬೆನ್ನಲ್ಲೇ ಶುದ್ಧ ಕುಡಿಯುವ ನೀರಿನ ಘಟಕಗಳು ಜನರಿಂದ ಡಬಲ್‌ಹಣ ವಸೂಲಿಗೆ ಇಳಿದಿದೆ. 5ರೂ ಕೊಟ್ಟು 20ಲೀಟರ್ ನೀರು ಪಡೆಯುತ್ತಿದ್ದ ಜನ ಈಗ 10 ರೂ. ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಸಿದ್ದರಾಮಯ್ಯ ಸರ್ಕಾರ ನೀರಿನ ದರ ಏರಿಸಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.