ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಭಿವೃದ್ಧಿ ಶೂನ್ಯ ಸಿದ್ದರಾಮಯ್ಯ ಸರ್ಕಾರ, ಕನ್ನಡಿಗರಿಗೆ “ಬೆಲೆ ಏರಿಕೆಯ ಭಾರ” ಹಾಕಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ.
ಫ್ರೀ ಫ್ರೀ ಫ್ರೀ.. ಎಂದು ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಹಗಲು ದರೋಡೆ ಮಾಡುತ್ತಿದೆ ಎಂದು ಜೆಡಿಎಸ್ ದೂರಿದೆ.
ಕರ್ನಾಟಕದ ಜನರಿಗೆ “ಬೆಲೆ ಏರಿಕೆ”ಯನ್ನೇ ಗ್ಯಾರಂಟಿಗೊಳಿಸಿದೆ ವಚನ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ. ಬೆಲೆ ಏರಿಕೆ ಗ್ಯಾರಂಟಿ, ಲೂಟಿ ಕೋರ ಕಾಂಗ್ರೆಸ್ ಎಂದು ಟ್ಯಾಗ್ ಮಾಡಿ ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿದೆ.