ಸ್ಮಾರ್ಟ್ ಮೀಟರ್ ಕರ್ಮಕಾಂಡಕ್ಕೆ ಉತ್ತರಿಸದ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ
ಅವರೇ ಹಾಗೂ ಇಂಧನ ಸಚಿವ ಟಿ.ಕೆ ಜಾರ್ಜ್ ಅವರೇ ಕರ್ನಾಟಕ ಬಿಜೆಪಿ ಸವಿವರವಾದ ದಾಖಲೆಗಳೊಂದಿಗೆ ನಿಮ್ಮ ಸ್ಮಾರ್ಟ್ ಮೀಟರ್ ಕರ್ಮಕಾಂಡವನ್ನು ಬಯಲಿಗೆಳೆದಿದ್ದರೂ ಸಮರ್ಪಕ ಉತ್ತರವನ್ನೇಕೆ ನೀಡುತ್ತಿಲ್ಲ? ಎಂದು ಮಾಜಿ ಡಿಸಿಎಂ, ಬಿಜೆಪಿ ನಾಯಕ, ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ ಪ್ರಶ್ನಿಸಿದ್ದಾರೆ.

ನಿಮ್ಮದು ಏನು ಮಾಡಿಯೂ ಧಕ್ಕಿಸಿಕೊಳ್ಳುತ್ತೇವೆಂಬ ದುರಹಂಕಾರವೇ ಅಥವಾ ಕರ್ನಾಟಕದ ಜನರನ್ನು ಸುಳ್ಳು ಹೇಳಿಯೇ ಮೂರ್ಖರನ್ನಾಗಿಸುತ್ತೇವೆಂಬ ಅತಿ ಆತ್ಮವಿಶ್ವಾಸವೇ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಅಸಂಬದ್ಧ ಉತ್ತರಗಳನ್ನು ಕೊಟ್ಟು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಬಿಟ್ಟು, ಬಿಜೆಪಿ ಮಾಡಿರುವ ಆರೋಪಗಳಿಗೆ ಸಮರ್ಪಕ ದಾಖಲೆಗಳನ್ನು ನೀಡಿ ಉತ್ತರಿಸಿ!

 ದಾಖಲೆಗಳಿದ್ದರೆ ಅಲ್ಲವೇ, ನೀಡುವುದು! ಸಾಮಾನ್ಯ ಜನರನ್ನು ಲೂಟಿ ಮಾಡಿ ಅಧಿಕಾರದಲ್ಲಿ ಮುಂದುವರೆಯುತ್ತೀರೆಂಬ ಭ್ರಮೆಯನ್ನು ಬಿಡಿ!ಸ್ಮಾರ್ಟ್ ಮೀಟರ್ ಹಗರಣವೇ ನಿಮ್ಮ ದರೋಡೆಕೋರ ಸರ್ಕಾರದ ಅಂತ್ಯ ಆರಂಭವಾಗಲಿದೆ, ನೆನಪಿಟ್ಟುಕೊಳ್ಳಿ!! ಎಂದು ಅಶ್ವಥ್ ನಾರಾಯಣ ಎಚ್ಚರಿಸಿದ್ದಾರೆ.

 

Share This Article
error: Content is protected !!
";