ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂಗೈನಲ್ಲಿ ಆಕಾಶ ತೋರಿಸಿ ಅಧಿಕಾರಕ್ಕೆ ಬಂದಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಕಳೆದ ಎರಡು ವರ್ಷಗಳಲ್ಲಿ ಬಿಟ್ಟಿದ್ದು ಬರೀ ರೈಲು.! 10 ಕೆಜಿ ಅಕ್ಕಿ ಬೇಕೋ ಬೇಡ್ವೋ ಅಂತ ಕಾಗೆ ಹಾರಿಸಿ 10 ಕೆಜಿ ಅಕ್ಕಿನೂ ಕೊಡದೆ, ಹಣವೂ ನೀಡದೆ ಬಡವರಿಗೆ ದ್ರೋಹ ಬಗೆದಿದೆ ಎಂದು ಬಿಜೆಪಿ ಹರಿಹಾಯ್ದಿದೆ.
ಕೇಂದ್ರ ಸರ್ಕಾರ ತನ್ನ ಪಾಲಿನ ಅಕ್ಕಿ ರಾಜ್ಯದ ಜನತೆಗೆ ನೀಡುತ್ತಿದೆ. ಆದರೆ, ಸಿದ್ದರಾಮಯ್ಯನವರ ಸರ್ಕಾರದ ಬಳಿ 10 ಕೆಜಿ ಹೋಗಲಿ.! 5 ಕೆಜಿ ಅಕ್ಕಿ ನೀಡುವುದಕ್ಕೂ ದುಡ್ಡಿಲ್ಲ.! ಇದರಿಂದ ಜೂನ್ ತಿಂಗಳ ಆಹಾರ ಪದಾರ್ಥ ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆ ಆಗಿಲ್ಲ.! ಜನರಿಗೆ ಸಿಕ್ಕಿಲ್ಲ.! ಎಂದು ಬಿಜೆಪಿ ದೂರಿದೆ.
ಸಿದ್ದರಾಮಯ್ಯನವರೇ, ಸರ್ಕಾರ ದಿವಾಳಿಯಾದರೂ ಯಾಕಿಷ್ಟು ಭಂಡತನ.? ತಾವು ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿ ಇಲ್ಲ.! ಕೂಡಲೇ ಕುರ್ಚಿ ಬಿಟ್ಟು ಮನೆಗೆ ನಡೆಯಿರಿ.! ಎಂದು ಬಿಜೆಪಿ ತಾಕೀತು ಮಾಡಿದೆ.

