ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಭದ್ರವಾಗಿದ್ದ ಕರ್ನಾಟಕದ ಆರ್ಥಿಕತೆಯನ್ನು ಹದಗೆಡಿಸಿ ಈಗ ಜನಸಾಮಾನ್ಯರು ಮುಟ್ಟಿದ್ದಕ್ಕೆಲ್ಲಾ ದರ ಏರಿಕೆ ಮಾಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿ ಈಗ ಮೆಟ್ರೋ ಸಾರಿಗೆ ಮೇಲೆ ಬಿದ್ದಿದೆ ಎಂದು ಬಿಜೆಪಿ ಕಿಡಿಕಾರಿದೆ.
ಕಾಂಗ್ರೆಸ್ ಆಡಳಿತದಲ್ಲಿ ಮೆಟ್ರೋ ಎನ್ನುವುದು ಕಾಗದಕ್ಕೆ ಸೀಮಿತವಾಗಿತ್ತು. ಬಿಜೆಪಿ ಸರ್ಕಾರದಿಂದ ಬೆಂಗಳೂರಿಗರ ಮೆಟ್ರೋ ಕನಸು ನನಸಾಗಿತ್ತು. ಈಗ ಮೆಟ್ರೋ ಟಿಕೆಟ್ ದರ ಏರಿಸಿ ಜನಸಾಮಾನ್ಯರ ಲೂಟಿ ಮಾಡಲು ಮುಂದಾಗಿದೆ.
ಬಸ್ ಟಿಕೆಟ್ ದರದ ಹೆಚ್ಚಳದ ಬೆನ್ನಲ್ಲೇ ಮೆಟ್ರೋ ಟಿಕೆಟ್ ದರ ಶೇ. 20 ರಷ್ಟು ಹೆಚ್ಚಳ ಮಾಡಲು ಮುಂದಾಗಿದೆ. ಸಿದ್ದರಾಮಯ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟ ಹಾಗೆ ನಟಿಸಿ, ಮತ್ತೊಂದು ಕೈಯಿಂದ ದುಪ್ಪಟ್ಟು ಕಿತ್ತುಕೊಳ್ಳುತ್ತಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.