ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಪ್ರವಾಸೋದ್ಯಮ, ಪುರಾತತ್ವ ಇಲಾಖೆ ಅಧೋಗತಿ ತಲುಪಿವೆ. ಕಲಬುರಗಿಯ ಸ್ಮಾರಕಗಳು, ಕೋಟೆಗಳು ಹಾಗೂ ಪ್ರವಾಸಿತಾಣಗಳು ಮೂಲಸೌಕರ್ಯ ಕೊರತೆಯಿಂದ ಬಳತ್ತಿರುವುದರಿಂದ ವಿದೇಶಿ ಪ್ರವಾಸಿಗರು ಸ್ಮಾರಕಗಳನ್ನು ವೀಕ್ಷಿಸದೆ ವಾಪಸ್‌ತೆರಳಿರುವುದು ನಾಚಿಕೆಗೇಡಿನ ಸಂಗತಿ.! ಎಂದು ಬಿಜೆಪಿ ಟೀಕಾಪ್ರಹಾರ ಮಾಡಿದೆ.
ಕಲಬುರಗಿ ನಗರದ ಸ್ಮಾರಕಗಳ ವೀಕ್ಷಣೆಗೆ ತೆರಳಲು ಉತ್ತಮ ರಸ್ತೆಗಳೇ ಇಲ್ಲ, ಎಲ್ಲೆಡೆ ಕೊಳಚೆ, ಕಸ, ಅಸಹ್ಯ ಸ್ಥಿತಿ ಇರುವುದರಿಂದಾಗಿ ವಿದೇಶಿ ಪ್ರವಾಸಿಗರು ಸ್ಮಾರಕ ವೀಕ್ಷಿಸದೆ ನಿರಾಸೆಯಿಂದ ವಾಪಸ್ ಹೋಗಿರುವುದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಇದುಕಲಬುರಗಿ ಇತಿಹಾಸಕ್ಕೆ ಮಾಡಿದ ಅವಮಾನ.
ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್‌ಅವರ ಕಡೆಗಣನೆಯಿಂದ ಕಲ್ಯಾಣ ಕರ್ನಾಟಕ ಭಾಗದ ಪ್ರವಾಸೋದ್ಯಮದ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ನಾಡಿನ ಗತವೈಭವ ಸಾರುವ ಸ್ಮಾರಕಗಳು, ಪುರಾತನ ದೇವಸ್ಥಾನಗಳು, ಶಿಲಾಶಾಸನಗಳಿಗೆ ರಕ್ಷಣೆ ಇಲ್ಲದಾಗಿದೆ ಎಂದು ಬಿಜೆಪಿ ದೂರಿದೆ.

