ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
14, 17, 19, 19, 20, 20, 20, 22, 23, 26, 29. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರೇ, ಇದು ಯಾವುದೋ ಐಪಿಎಲ್ ಕ್ರಿಕೆಟ್ ಮ್ಯಾಚ್ ನ ಸ್ಕೋರ್ ಬೋರ್ಡ್ ಅಲ್ಲ. ಆರ್ ಸಿಬಿ ತಾರೆಗಳ ಬೆನ್ನಿನ ಹಿಂದೆ ಕಾಣುವ ಜರ್ಸಿ ನಂಬರ್ ಅಲ್ಲ.
ಆರ್ ಸಿಬಿ ಆಟಗಾರರು ಹರಾಜಿನಲ್ಲಿ ಪಡೆದುಕೊಂಡ ಕೋಟಿಗಳ ಲೆಕ್ಕವೂ ಅಲ್ಲ. ಇದು ಕಾಂಗ್ರೆಸ್ ಸರ್ಕಾರದ ಪ್ರಚಾರದ ತೆವಲಿಗೆ, ಹೊಣೆಗೇಡಿತನಕ್ಕೆ, ಚೆಲ್ಲಾಟಕ್ಕೆ ಬಲಿಯಾದ 11 ಎಳೆಯ ಜೀವಗಳ ವಯಸ್ಸು ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಾಡಿದ್ದಾರೆ.
ಬಾಳಿ ಬದುಕಬೇಕಾದ ಯುವಕರನ್ನು ನಡುರಸ್ತೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿಸಿ ಸಾಯಿಸಿದ ಕಾಂಗ್ರೆಸ್ ಸರ್ಕಾರವನ್ನ ಆ ಹೆತ್ತವರ ಆಕ್ರೋಶ ಸುಡದೇ ಇರುತ್ತಾ? ಹೆಮ್ಮರವಾಗಿ ಬೆಳೆದು ಸಾಧನೆ ಮಾಡಿ,
ಚೆನ್ನಾಗಿ ಬಾಳಿ ಬದುಕಿ ಹೆತ್ತವರಿಗೆ ಸಂತೋಷ ತರಬೇಕಾಗಿದ್ದ ಜೀವಗಳನ್ನ ಚಿಗುರಿನಲ್ಲೇ ಚಿವುಟಿ ಹಾಕಿದ ಕಾಂಗ್ರೆಸ್ ಸರ್ಕಾರಕ್ಕೆ ಆ ನೊಂದ ಹೆತ್ತವರ ಕಣ್ಣೀರಿನ ಶಾಪ ತಟ್ಟದೇ ಇರುತ್ತಾ?
ನಿಮಗೆ ಆತ್ಮಸಾಕ್ಷಿ ಅನ್ನೋದು ಇದ್ದರೆ ಒಮ್ಮೆ ಏಕಾಂತದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.

