ಸ್ಮಶಾನದ ಸಿಬ್ಬಂದಿಗೆ ವೇತನ ನೀಡದ ಕಾಂಗ್ರೆಸ್  ಸರ್ಕಾರ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆ ಸರ್ಕಾರದ ಆಡಳಿತದಲ್ಲಿ ಕರ್ನಾಟಕಕ್ಕೆ ಎಂತಹ ದರಿದ್ರ ಸ್ಥಿತಿ ಬಂದಿದೆ! ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ. ಗ್ರೇಟರ್‌ಬೆಂಗಳೂರು ವ್ಯಾಪ್ತಿಯಲ್ಲಿ ಸ್ಮಶಾನದ ಸಿಬ್ಬಂದಿಗೆ 9 ತಿಂಗಳಿಂದ ವೇತನವನ್ನೇ ನೀಡಿಲ್ಲ.

ವಿದ್ಯುತ್‌ಚಿತಾಗಾರ ಮತ್ತು ರುದ್ರಭೂಮಿಯಲ್ಲಿ ಕೆಲಸ ಮಾಡುವ 145ಕ್ಕೂ ಹೆಚ್ಚು ಸಿಬ್ಬಂದಿ ಸಂಬಳವಿಲ್ಲದೇ, ಅವರ ಕುಟುಂಬಗಳು ಪರದಾಡುವಂತಾಗಿದೆ.

- Advertisement - 

ರಾಜ್ಯ ಸರ್ಕಾರ, ಸ್ಮಶಾನ ಸಿಬ್ಬಂದಿಗೆ ಶಾಶ್ವತ ಮನೆಗಳ ಬೇಡಿಕೆಯನ್ನು ಪರಿಹರಿಸಿಲ್ಲ, ಕುಟುಂಬಗಳು ರುದ್ರಭೂಮಿಯ ಶಿಥಿಲವಾದ ಕೊಠಡಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ರುದ್ರಭೂಮಿ ಮತ್ತು ವಿದ್ಯುತ್ ಚಿತಾಗಾರ ಸಂಘ ಆರೋಪಿಸಿದೆ ಎಂದು ಜೆಡಿಎಸ್ ತಿಳಿಸಿದೆ.

ಸರ್ಕಾರಿ ನೌಕರರಿಗೆ, ಶಾಲಾ ಶಿಕ್ಷಕರಿಗೆ, ಕಾಲೇಜು ಉಪನ್ಯಾಸಕರಿಗೆ, ಆಶಾ ಕಾರ್ಯಕರ್ತೆಯರಿಗೆ ವೇತನ ನೀಡದಷ್ಟು ದಿವಾಳಿಯಾಗಿದೆಯೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

- Advertisement - 

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿನ ಪಾಲಿಕೆ ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರಿಗೆ ಕಳೆದ  4 ತಿಂಗಳಿಂದ ವೇತನ ಪಾವತಿಯಾಗಿಲ್ಲ.

ಒಂದ್ಕಡೆ ಸಮರ್ಪಕವಾದ ಮೂಲಸೌಲಭ್ಯವಿಲ್ಲದೇ ಸರ್ಕಾರಿ ಶಾಲೆ-ಕಾಲೇಜುಗಳು ಸೊರಗುತ್ತಿವೆ, ಮತ್ತೊಂದ್ಕಡೆ ಶಿಕ್ಷಕರು ಸಂಬಳವಿಲ್ಲದೆ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಡಿಸಿಎಂ ಡಿ.ಕೆ ಶಿವಕುಮಾರ್ ಅವರ ತವರು ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹ ಸುತ್ತಲು ಒಂದು ಮೀಟರ್‌ಬಟ್ಟೆಯೂ ಇಲ್ಲದಿರುವುದು ಶೋಚನೀಯ.

ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಸುತ್ತಲು, ಮೃತನ ಕುಟುಂಬದವರೇ ಬಟ್ಟೆ ತರಬೇಕಾದ ದುಸ್ಥಿತಿ ಬಂದಿರುವುದು ಸಿದ್ದರಾಮಯ್ಯ ಸರ್ಕಾರಕ್ಕೆ ನಾಚಿಕೆಗೇಡು. 

ಡಮ್ಮಿ ಡಿಸಿಎಂ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಿದರೇ ಅಭಿವೃದ್ಧಿ ಆಗುವುದಿಲ್ಲ. ಅದು ನಿಮ್ಮ ಬೂಟಾಟಿಕೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

 

Share This Article
error: Content is protected !!
";