ಕಾಂಗ್ರೆಸ್ ಸರ್ಕಾರದ 6ನೇ ಗೂಂಡಾ ರಾಜ್ಯ ಗ್ಯಾರಂಟಿ!

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅತ್ತ ಸಿಎಂ ಸಿದ್ದರಾಮಯ್ಯನವರು ಅತ್ಯಂತ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಮಾಡುವ ಕನಸು ಕಾಣುತ್ತ ಔತಣಕೂಟ
, ಸಮಾವೇಶ ಎಂದು ಸಂಭ್ರಮ ಪಡುತ್ತಿದ್ದರೆ, ಇತ್ತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೊಸ ವರ್ಷದ ಮೊದಲ ವಾರದಲ್ಲೇ ರಾಜ್ಯದಲ್ಲಿ ಗುಂಡಾರಾಜ್ಯದ ಗದ್ದಲ ಸದ್ದು ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ಮಾಡಿದರು.

ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರ ಮೇಲೆ ಕೊಲೆ ಯತ್ನ. ಯಲ್ಲಾಪುರದಲ್ಲಿ ಹಿಂದೂ ಹುಡುಗಿಯ ಹತ್ಯೆ. ಬೆಂಗಳೂರಿನಲ್ಲಿ ಓಂಶಕ್ತಿ ಭಕ್ತರ ಮೆರವಣಿಗೆ ಮೇಲೆ ಕಲ್ಲು ತೂರಾಟ, ಅಮಾಯಕ ಮಹಿಳೆಯರು-ಮಕ್ಕಳಿಗೆ ಗಾಯ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣದಿಂದಾಗಿ ಮತಾಂಧ ದುಷ್ಕರ್ಮಿಗಳ
, ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸ ಮಿತಿ ಮೀರಿದೆ. ಬಹುಸಂಖ್ಯಾತರ ಧಾರ್ಮಿಕ ಆಚರಣೆಗಳಿಗೆ ರಕ್ಷಣೆ ಇಲ್ಲದಂತಾಗಿದೆ, ಜನಸಾಮಾನ್ಯರಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಅಶೋಕ್ ಟೀಕಿಸಿದರು.

- Advertisement - 

ಇಷ್ಟಾದರೂ ಕಾಂಗ್ರೆಸ್ ಸರಕಾರದ ಮೌನ ಮತ್ತು ನಿರ್ಲಕ್ಷ್ಯ ನಾಚಿಕೆಗೇಡು. ದ್ವೇಷ ಕೃತ್ಯ ಎಸಗುತ್ತಿರುವ ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು. ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸಬೇಡಿ! ಎಂದು ಅವರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹೊಸ ವರ್ಷ ರಾಜ್ಯದ ಪಾಲಿಗೆ ಹರ್ಷದಾಯಕವಾಗುವುದಿರಲಿ, 3-4 ದಿನಗಳಲ್ಲಿ, ಬಳ್ಳಾರಿಯಲ್ಲಿ ನಮ್ಮ ಪಕ್ಷದ ಶಾಸಕ ಜನಾರ್ದನ ರೆಡ್ಡಿ ಮೇಲೆ ಕೊಲೆ ಯತ್ನ ನಡೆದಿದೆ, ಯಲ್ಲಾಪುರದಲ್ಲಿ ಹಾಡಹಗಲೇ ಹಿಂದೂ ಹುಡುಗಿಯ ಹತ್ಯೆ ಪ್ರಕರಣ ನಡೆದಿದೆ, ಬೆಂಗಳೂರಿನಲ್ಲಿ ಓಂಶಕ್ತಿ ಭಕ್ತರ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆದು ಹಲವಾರು ಮಂದಿ ಗಾಯಗೊಂಡಿದ್ದಾರೆ.

- Advertisement - 

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕೀಳು ತುಷ್ಟೀಕರಣ, ಓಟ್ ಬ್ಯಾಂಕ್ ರಾಜಕೀಯಗಳಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೋ ಅಥವಾ ಇಲ್ಲವೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಜೆ.ಜೆ.ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆ ಮೇಲೆ ನಡೆದ ಕಲ್ಲೆಸೆತ ಪ್ರಕರಣವನ್ನು ಪಕ್ಷ ಕಟುವಾಗಿ ಖಂಡಿಸುತ್ತದೆ. ಘಟನೆಯಲ್ಲಿ ಪಾಲ್ಗೊಂಡಿದ್ದ ಅಮಾಯಕ ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದು, ರಾಜ್ಯದಲ್ಲಿ ಗೂಂಡಾ ರಾಜ್ಯತಲೆ ಎತ್ತಿರುವುದಕ್ಕೆ ಮತ್ತೊಂದು ಸ್ಪಷ್ಟ ನಿದರ್ಶನವಾಗಿದೆ ಎಂದು ವಾಗ್ದಾಳಿ ಮಾಡಿದರು.

ರಾಜ್ಯ ಸರ್ಕಾರ ತಮ್ಮ ಬಗ್ಗೆ ಮೃಧುಧೋರಣೆ ಹೊಂದಿರುವುದು ತಿಳಿದಿರುವುದರಿಂದಲೇ ರಾಜ್ಯದಲ್ಲಿ ಮೇಲಿಂದ ಮೇಲೆ ಮತಾಂಧರ, ದುಷ್ಕರ್ಮಿಗಳ ಅಪರಾಧಿ ಕೃತ್ಯಗಳು, ಅಟ್ಟಹಾಸಗಳು ನಡೆಯುತ್ತಿವೆ. ನಮ್ಮ ನೆಲದಲ್ಲಿ, ನಮ್ಮ ಧಾರ್ಮಿಕ ಆಚರಣೆಗಳನ್ನು, ನಾವೇ ಭಯದಿಂದ ಆಚರಿಸುವ ಪರಿಸ್ಥಿತಿ ನಿರ್ಮಿಸಿರುವ ಕಾಂಗ್ರೆಸ್ ದುರಾಡಳಿತ, ‘ಗೂಂಡಾಗಿರಿ ಗ್ಯಾರಂಟಿಯಿಂದಾಗಿ ಬಹುಸಂಖ್ಯಾತರೇ ಭಯದಿಂದ ಬದುಕುವಂತಾಗಿದೆ.

ತಮ್ಮ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಕೂಡ ತುಳಿಯುತ್ತಿರುವ ಈ ಕಾಂಗ್ರೆಸ್ ಸರ್ಕಾರ, ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕೆಟ್ಟ, ದೌರ್ಭಾಗ್ಯಪೂರ್ಣ ಸರ್ಕಾರವಾಗಿದೆ. ಹಿಂದೂಗಳ ಹಬ್ಬಗಳಿಗೆ, ಆಚರಣೆಗಳಿಗೆ ರಕ್ಷಣೆ ಇಲ್ಲದ ಇಂತಹ ಉದ್ವಿಗ್ನ ಸ್ಥಿತಿ ಕರ್ನಾಟದಲ್ಲಿ ಬಂದಿರುವುದೇ ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆಯಾಗಿದೆ.

ಶಾಂತಿ ಕದಡಲು, ಮೇಲಿಂದ ಮೇಲೆ ಇಂತಹ ಉದ್ದೇಶಪೂರ್ವಕ ಪ್ರಚೋದನಕಾರಿ ಕೃತ್ಯಗಳು ನಡೆಯುತ್ತಿದ್ದರೂ, ರಾಜ್ಯ ಸರ್ಕಾರದ ದಿವ್ಯ ಮೌನ ನಾಚಿಕೆಗೇಡು ಮಾತ್ರವಲ್ಲ, ನಿರ್ಲಜ್ಜತನದ ಪರಮಾವಧಿ. ದ್ವೇಷ ಭಾಷಣ ಇರಲಿ, ತನ್ನ ಓಟ್ ಬ್ಯಾಂಕಿನ ದ್ವೇಷ ಕೃತ್ಯಗಳಿಗೂ ಕಾಂಗ್ರೆಸ್ ಸರ್ಕಾರ ಏನೂ ಕ್ರಮ ಕೈಗೊಳ್ಳುವುದಿಲ್ಲ ಎನ್ನುವುದು ಗೊತ್ತಿರುವುದರಿಂದಲೇ ಸಮಾಜಘಾತುಕರು ಭಯವಿಲ್ಲದೆ ಮನಬಂದಂತೆ ವರ್ತಿಸುತ್ತಿದ್ದಾರೆ.

ಇದಕ್ಕೆ ಮುಖ್ಯಮಂತ್ರಿಗಳು, ಗೃಹ ಸಚಿವರೇ ಸಂಪೂರ್ಣ ಹೊಣೆಗಾರರು! ಮಾನ್ಯ ಮುಖ್ಯಮಂತ್ರಿಗಳೇ, ದುಷ್ಕೃತ್ಯ ಎಸಗಿರುವ ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ, ಜೈಲಿಗಟ್ಟಿ. ಇಲ್ಲದಿದ್ದರೆ ರಾಜ್ಯಾದ್ಯಂತ ಜನಾಗ್ರಹದ ಕಿಚ್ಚು ಎದುರಿಸಲು ಸಿದ್ಧರಾಗಿ. ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ! ಎಂದು ಅವರು ಎಚ್ಚರಿಸಿದ್ದಾರೆ.

 

 

Share This Article
error: Content is protected !!
";