ರೈತ ಕುಟುಂಬದ ಕೈ ಹಿಡಿದ ಕಾಂಗ್ರೆಸ್ ಗ್ಯಾರಂಟಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತ ಕುಟುಂಬದ ಕೈ ಹಿಡಿದ ಕಾಂಗ್ರೆಸ್ ಗ್ಯಾರಂಟಿ! ಗೃಹಲಕ್ಷ್ಮಿ ಯೋಜನೆಯ ಯಶೋಗಾಥೆ ಬಿಟ್ಟಿಭಾಗ್ಯ ಎಂದು ಟೀಕಿಸುತ್ತಿದ್ದ ಅವಿವೇಕಿ ಬಿಜೆಪಿಗರ ನಿದ್ದೆಗೆಡಿಸುವಂತಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಗದಗ ಜಿಲ್ಲೆ ಮುಳಗುಂದ ಪಟ್ಟಣದ ನಿರ್ಮಲಾ ಸೋಮಶೇಖರ ಉರಿಕೊಳ್ಳಿ ರೈತ ದಂಪತಿ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಿಂದ ತಮ್ಮ ಖಾತೆಗೆ ಬಂದ ಸುಮಾರು 40,000 ರೂ. ಹಣ ಕೂಡಿಟ್ಟು ಜಮೀನಿನಲ್ಲಿ ಬೋರ್ ವೆಲ್ ಕೊರೆಸುವ ಮೂಲಕ ಸ್ವಾವಲಂಬಿ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಂಡಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಹಸಿವನ್ನು ನೀಗಿಸುವುದಲ್ಲದೆ ಜನರ ಅವಶ್ಯಕತೆಗಳನ್ನೂ ಪೂರೈಸುವ ಮೂಲಕ ಬಡವರ ಬದುಕಿಗೆ ಆಸರೆಯಾಗಿವೆ ಎಂದು ಕಾಂಗ್ರೆಸ್ ಮೆಚ್ಚುಗೆ ವ್ಯಕ್ತಪಡಿಸಿದೆ.

 

 

- Advertisement -  - Advertisement - 
Share This Article
error: Content is protected !!
";