ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಗ್ಯಾರಂಟಿಗಳು ದಲಿತರನ್ನು ಶೋಷಣೆ ಮಾಡುತ್ತಿವೆ. ದಲಿತರ ಅಭಿವೃದ್ಧಿಗಾಗಿ ಮೀಸಲಾಗಬೇಕಿದ್ದ ಹಣ, ಗ್ಯಾರಂಟಿ ಯೋಜನೆಗಳ ಒಡಲು ಸೇರುತ್ತಿದೆ. ರಾಜ್ಯದಲ್ಲಿ ದಲಿತರನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ದ್ವಿತೀಯ ದರ್ಜೆ ಪ್ರಜೆಗಳಂತೆ ನಡೆಸಿಕೊಳ್ಳುತ್ತಿದ್ದರೂ ಕಾಂಗ್ರೆಸ್ಸಿನ ಪ್ರಭಾವಿ ದಲಿತ ನಾಯಕರು ತುಟಿ ಬಿಚ್ಚುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಮೀಸಲು ಕ್ಷೇತ್ರದಿಂದ ಗೆದ್ದು ಕಾಂಗ್ರೆಸ್ಸಿನ ಪ್ರಭಾವಿ ದಲಿತ ನಾಯಕರಾಗಿ ಬೆಳೆದರೂ ಸಿದ್ದರಾಮಯ್ಯ ಸರ್ಕಾರ ದಲಿತರಿಗೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಸೊಲ್ಲೆತ್ತುತ್ತಿಲ್ಲ.
ಗ್ಯಾರಂಟಿಗಳು ದಲಿತರ ಜೀವನ ಮಟ್ಟವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದರೂ ಸಚಿವ ಸಂಪುಟದಲ್ಲೇ ಇರುವ ಪರಮೇಶ್ವರ್, ಪ್ರಿಯಾಂಕ್‌ಖರ್ಗೆ, ಸತೀಶ್‌ಜಾರಕಿಹೊಳಿ ಅವರಂತಹ ದಲಿತ ನಾಯಕರು ಸರ್ಕಾರದ ವಿರುದ್ಧ ಮಾತನಾಡುವ ಧ್ವನಿ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿ ಕಾಂಗ್ರೆಸ್ಸಿಗರಿಗೆ ದಲಿತರೆಂದರೆ ಅಲರ್ಜಿ ಏಕೆ? ಎಂದು ಬಿಜೆಪಿ ಪ್ರಶ್ನಿಸಿದೆ.