ಪಾಕಿಸ್ತಾನಿ ಪರ ಸಹಾನುಭೂತಿ ಇರುವವರನ್ನು ನಿಯೋಗಕ್ಕೆ ನಾಮ ನಿರ್ದೇಶನ ಮಾಡಿದ ಕಾಂಗ್ರೆಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರ ಹಿತಾಸಕ್ತಿ, ರಾಷ್ಟ್ರದ ಸಾರ್ವಭೌಮತ್ವ ಹಾಗೂ ಸುರಕ್ಷತೆಯ ಪ್ರಶ್ನೆ ಎದುರಾದಾಗ ಕಾಂಗ್ರೆಸ್ ಎಂದೂ ತೆರೆದ ಮನಸ್ಸಿನಿಂದ ನಡೆದುಕೊಂಡ ಉದಾಹರಣೆಯಿಲ್ಲ, ನೈಜ ಬದ್ಧತೆ ತೋರಿದ ನಿದರ್ಶನಗಳಿಲ್ಲ. ತನ್ನ ಪಕ್ಷದಲ್ಲಿನ ರಾಷ್ಟ್ರ ನಿಷ್ಠೆ ಹಾಗೂ ಕಾಳಜಿ ತೋರುವವರನ್ನು ಬದಿಗೆ ಸರಿಸಿದ್ದು ಅವರೆನ್ನಲ್ಲ ರಾಜಕೀಯವಾಗಿ ಮೂಲೋತ್ಪಾಟನೆ ಮಾಡಿದ್ದೇ ಹೆಚ್ಚು, ಆ ಸಾಲಿಗೆ ಈಗ ಶಶಿ ತರೂರ್ ಅವರು ಸೇರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

- Advertisement - 

ಪಾಕಿಸ್ತಾನದ ಉಗ್ರ ಪೋಷಕ ಮುಖವಾಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಚ್ಚಿಡಲು ರಾಜತಾಂತ್ರಿಕ ಮಾರ್ಗದ ಮೂಲಕ ವಿವಿಧ ರಾಷ್ಟ್ರಗಳಿಗೆ ಭಾರತದ ಸರ್ವ ಪಕ್ಷಗಳ ಸಂಸದರ ನಿಯೋಗದಲ್ಲಿ ಶಶಿತರೂರ್ ಅವರ ಸೇರ್ಪಡೆಯಿಂದ ಕಾಂಗ್ರೆಸ್ ತನ್ನ ಅಸೂಯೆ ಕಕ್ಕುತ್ತಿದೆ.

- Advertisement - 

ಅಂತಾರಾಷ್ಟ್ರೀಯ ಮಟ್ಟದ ವಿದೇಶಾಂಗ ನೀತಿಯ ಅವರ ಅನುಭವ ಹಾಗೂ ಸಾಮರ್ಥ್ಯವನ್ನು ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಅವರನ್ನು ಆಯ್ಕೆ ಮಾಡಿದರೆ ಕಾಂಗ್ರೆಸ್ ತನ್ನ ನಿಯೋಗದಲ್ಲಿ ಕರ್ನಾಟಕದ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ಘೋಷಣೆ ಕೂಗಿಸಿದ್ದ ಸೈಯ್ಯದ್ ನಾಸೀರ್ ಹುಸೇನ್ ಹಾಗೂ ಗೌರವ್ ಗೊಗೊಯ್ ರಂತಹ ಪಾಕಿಸ್ತಾನಿ ಪರ ಸಹಾನುಭೂತಿ ಇರುವವರನ್ನು ನಿಯೋಗಕ್ಕೆ ನಾಮನಿರ್ದೇಶನ ಮಾಡಿದ್ದು ಇದು ಕಾಂಗ್ರೆಸ್ ಪಕ್ಷದ ನಕಲಿ ರಾಷ್ಟ್ರಪ್ರೇಮದ ಅಸಲಿ ಮುಖವಾಡವನ್ನು ಕಳಚಿಟ್ಟಿದೆ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.

ದೇಶ ಮೊದಲು ಪಕ್ಷ ನಂತರ ಎಂಬ ತತ್ವ ಬಿಜೆಪಿಯದ್ದು”, ‘ಅಧಿಕಾರ, ಪಕ್ಷ ಮೊದಲು ದೇಶ ಆನಂತರ ಎಂಬ ಸಿದ್ದಾಂತ ಕಾಂಗ್ರೆಸ್ ನದ್ದುಎಂಬುದು ಕಾಂಗ್ರೆಸ್ ಪಕ್ಷದ ನಡವಳಿಕೆಯಿಂದ ಸಾಬೀತಾಗುತ್ತಿದೆ. ಭಾರತದ ಸರ್ವಪಕ್ಷಗಳ ಸಂಸದರ ನಿಯೋಗದ ಭಾಗವಾಗಲು ಬಹುತೇಕ ವಿರೋಧ ಪಕ್ಷಗಳೆಲ್ಲವೂ ಸರ್ವಸಮ್ಮತಿ ಸೂಚಿಸಿ ಇದು ರಾಷ್ಟ್ರದ ಘನತೆಯ ವಿಚಾರ ಹೆಮ್ಮೆಯ ಭಾರತವನ್ನು ಪ್ರತಿನಿಧಿಸಲು ತಮಗೆ ದೊರೆತಿರುವ ವಿಶೇಷ ಅವಕಾಶ ಎಂದು ಪರಿಗಣಿಸಿದ್ದಾರೆ.

- Advertisement - 

ಆದರೆ ಕಾಂಗ್ರೆಸ್ ಮಾತ್ರ ತನ್ನ ಅಪಸ್ವರ ಹಾಗೂ ಅಸೂಯೆಯ ಪ್ರತಿಕ್ರಿಯೆ ವ್ಯಕ್ತಪಡಿಸುವ ಮೂಲಕ ರಾಷ್ಟ್ರ ಹಿತಾಸಕ್ತಿಗಿಂತಲೂ ತನ್ನ ಸ್ವಾರ್ಥವೇ ಹೆಚ್ಚು ಎಂಬುದನ್ನು ಬಹಿರಂಗಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

 

 

Share This Article
error: Content is protected !!
";