ಭೈರತಿ ಸುರೇಶ್ ಅವರನ್ನ ಎಐಸಿಸಿ ಕಚೇರಿಯ ಬಾಗಿಲಲ್ಲೇ ನಿಲ್ಲಿಸಿದ ಕಾಂಗ್ರೆಸ್ ಹೈಕಮಾಂಡ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿಸಿಎಂ ಡಿಕೆ ಶಿವಕುಮಾರ್ ಅವರು ಅತೀ ಶೀಘ್ರದಲ್ಲೇ ಹೇಗೆ ಒದ್ದು ಅಧಿಕಾರ ಕಿತ್ತುಕೊಳ್ಳಲಿದ್ದಾರೆ ಎನ್ನುವುದರ ಮತ್ತೊಂದು ಟ್ರೈಲರ್ ಇಂದು ದೆಹಲಿಯಲ್ಲಿ  ಬಿಡುಗಡೆಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಡಿನ್ನರ್ ಮೀಟಿಂಗ್ ಅನ್ನ ದೆಹಲಿಯ ಹೈಕಮಾಂಡ್ ಮೂಲಕ ಏಕಾಏಕಿ ರದ್ದು ಪಡಿಸಿದ ಡಿಸಿಎಂ ಸಾಹೇಬರು, ಈಗ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಭೈರತಿ ಸುರೇಶ್ ಅವರನ್ನ ದೆಹಲಿಯ ನೂತನ ಎಐಸಿಸಿ ಕಚೇರಿಯ ಬಾಗಿಲಲ್ಲೇ ನಿಲ್ಲಿಸಿ ಕಾಂಗ್ರೆಸ್ ಹೈಕಮಾಂಡ್ ತನ್ನ ಜೇಬಿನಲ್ಲಿದೆ ಎನ್ನುವ ಸಂದೇಶವನ್ನು ರವಾನಿಸುವಲ್ಲಿ ಮತ್ತೊಮ್ಮೆ ಯಶಸ್ವಿ ಆದಂತಿದ್ದಾರೆ ಎಂದು ಅಶೋಕ್ ಟೀಕಾಪ್ರಹಾರ ಮಾಡಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಈ ಕುರ್ಚಿ ಕಿತ್ತಾಟದ ಕ್ಲೈಮಾಕ್ಸ್ ಅತ್ಯಂತ ರಣರೋಚಕವಾಗಿರುವುದು ಮಾತ್ರ ಪಕ್ಕಾ ಗ್ಯಾರೆಂಟಿ ಎಂದು ಅಶೋಕ್ ಭವಿಷ್ಯ ನುಡಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";