ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನಲ್ಲಿ ಶಾಸಕರು ಅಧಿಕಾರಕ್ಕೆ ಬಂದು ಒಂದುವರೆ ವರ್ಷವಾಗಿದೆ.ಆದರೇ ಅವರ ಅಭಿವೃದ್ಧಿ ಕಾರ್ಯಗಳು ಮಾತ್ರ ಶೂನ್ಯ. ಈ ಹಿಂದೆ ವೆಂಕಟರಣಯ್ಯ ಶಾಸಕರಾಗಿದ್ದಾಗ ಮಂಜೂರಾಗಿದ್ದ ಕಾಮಗರಿಗಳ ಹೆಸರನ್ನೇಳಿ ಅಭಿವೃದ್ದಿ ಎಂದು ಹೇಳುತ್ತಿದ್ದಾರೆ ಈ ಬಗ್ಗೆ ಚರ್ಚೆಗೆ ಸಿದ್ಧ ಎಂದು ಶಾಸಕರ ವಿರುದ್ಧ ಕೆ.ಪಿ.ಸಿ.ಸಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ. ಜಿ.ಲಕ್ಷ್ಮೀಪತಿ ಕಿಡಿಕಾರಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರ ಅಲ್ಪಸಂಖ್ಯಾತರ ಅನುದಾನದ ಅಡಿಯಲ್ಲಿ 3 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನವನ್ನು ನಗರ ಸಭೆಯ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರು ಅಧಿಕ ಸಂಖ್ಯೆಯಲ್ಲಿ ವಾಸ ಮಾಡುವ ವಾರ್ಡ್ ಗಳಿಗೆ ಅನುದಾನ ಹಂಚಿಕೆ ಮಾಡಬೇಕಿತ್ತು ಆದರೆ. ಶಾಸಕರು ನಿಯಮವನ್ನು ಮೀರಿ ಅಲ್ಪಸಂಖ್ಯಾತರೇ ಇಲ್ಲದ ಸ್ಥಳಗಳಿಗೆ ಅನುದಾನ ಹಂಚಿಕೆ ಮಾಡಿದ್ದಾರೆ.
ಕ್ರಿಯಾ ಯೋಜನೆ ಮಾಡುವಾಗ ನಗರ ಸಭೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಂಚಿಕೆ ಮಾಡಬೇಕಿತ್ತು ಆದರೆ ಕೇವಲ ಬಿಜೆಪಿ ಜೆಡಿಎಸ್ ಸದಸ್ಯರಿರುವ ವಾರ್ಡ್ ಗಳಿಗೆ ಮಾತ್ರ ಅನುದಾನ ಹಂಚಿಕೆ ಮಾಡಿ ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿದರು.
ಕಾಮಗಾರಿ ಒಪ್ಪಿಸಿರುವುದು ಅಕ್ರಮ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಂಬಂಧಿಸಿದ ಕೆ ಐ ಆರ್‌ಡಿ ಎಲ್ ವಿಭಾಗಕ್ಕೆ ಕಾಮಗಾರಿಯನ್ನು ಗುತ್ತಿಗೆಗೆ ನೀಡದೆ, ರಾಜಾಜಿನಗರ ಎರಡನೇ ಡಿವಿಷನ್ ಗೆ ಒಪ್ಪಿಸಿದ್ದಾರೆ.
ಇದು ಕಾನೂನೂ ಬಾಹಿರ. ಅಲ್ಲದೇ ನಗರ ಸಭೆ ವ್ಯಾಪ್ತಿಯಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ನಗರ ಸಭೆಯ ಅನುಮತಿಯನ್ನು ಪಡೆಯಬೇಕು, ಯಾವುದೇ ಅನುಮತಿ ಪಡೆಯದೆ ಕಾಮಗಾರಿ ನಡೆಸುತ್ತಿರುವುದು ಅಕ್ರಮವಾಗಿದೆ.
ಕೆಐಆರ್‌ಡಿಎಲ್‌ಯಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವ ವ್ಯಕ್ತಿ ನಗರ ಸಭೆ ಸದಸ್ಯರಿಗೆ ದಮ್ಕಿ ಹಾಕಿದ್ದಾರೆ ಬಹಿರಂಗವಾಗಿ ಕ್ಷಮೆ ಕೇಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ದೂರು ನೀಡಿ ಎಫ್‌ಐಆರ್ ದಾಖಲು ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಬೈರೇಗೌಡ ಮಾತನಾಡಿ, ತಾಲೂಕಿನ ಜನ ಆಯ್ಕೆ ಮಾಡಿದ್ದಾರೆ. ಅಭಿವೃದ್ದಿ ಮಾಡದೇ ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಾ ಕಾಲಕಳೆಯುತ್ತಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ. ಕಳೆದ ಒಂದುವರೆ ವರ್ಷದಲ್ಲಿ ನಗರ ಸಭೆ ವ್ಯಾಪ್ತಿ,ಗ್ರಾಮಾಂತರ ವ್ಯಾಪ್ತಿಯಲ್ಲಿ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನೆ ಮಾಡಿದರು.
ನಗರ ಸಭಾ ಸದಸ್ಯ ಶಿವಶಂಕರ್ ಮಾತನಾಡಿ, ಸರಕಾರ ಯಾವುದೇ ತಾರತಮ್ಯ ಮಾಡದೇ ಅನುದಾನ ಬಿಡುಗಡೆ ಮಾಡಿದೆ. ಆದರೆ ಶಾಸಕರು ವಾರ್ಡ್ ವಾರು ಅನುದಾನದ ಕ್ರಿಯಾಯೋಜನೆ ಮಾಡುವಾಗ ಎಲ್ಲಾ ನಗರಸಭೆ ಸದಸ್ಯರನ್ನ ಒಳಗೊಂಡು ಮಾಡಬೇಕು.
ಆದರೆ ಕೇವಲ ಬಿಜೆಪಿ, ಜೆಡಿಎಸ್ ಸದಸ್ಯರ ವಾರ್ಡ್ ಗಳಿಗೆ ಮಾತ್ರ ಅನುದಾನ ನೀಡುತ್ತಿದ್ದಾರೆ ಈ ರೀತಿಯಾಗಿ ನಗರದ ಅಭಿವೃದ್ದಿಗೆ ಶಾಸಕರು ಅಡ್ಡಿಪಡಿಸುತ್ತಿದ್ದಾರೆ. ನಾನು ಬಿಜೆಪಿಯಲ್ಲಿ ಇದ್ದವನೇ 12 ವರ್ಷ ಬಿಜೆಪಿಗೆ ಅಳಿಲು ಸೇವೆ ಇದೆ. ನೀವು ಬಂದು ವಿಷ ಬಿಜೆಪಿ ಬಿತ್ತಿತ್ತುರೋದು, ನಿಮ್ಮ ಜೊತೆಯಲ್ಲಿರುವ ಕೆಲ ಮುಖಂಡರು ವಿಷ ಬೀಜ ಬಿತ್ತುತ್ತಿರೋದು ಕಾರಣಾಂತರಗಳಿಂದ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿ ನಿಷ್ಠಯಿಂದ ಇದ್ದೇವೆ
ನೀವು ಶಾಸಕರಾಗಿ ನಗರ ಸಭೆ ವಾಪ್ತಿಯಲ್ಲಿ ಒಂದು ಹಳ್ಳ ಮುಚ್ಚಿಲ್ಲ, ಅವರ ಹೆಸರಿನ ಶಂಕುಸ್ಥಾಪನೆಯ ಒಂದು ಕಲ್ಲು ತೋರಿಸಿ..? ಎಂದು ಆಕ್ರೋಶ ಹೋರಹಾಕಿದರು.
ಈ ವೇಳೆ ಕೆಪಿಸಿಸಿ ಸದಸ್ಯರ ಹೇಮಂತ್ ರಾಜ್ ಕಾಂಗ್ರೆಸ್ ನಗರ ಸಭಾ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.