ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇವಲ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಇಂಡಿ ಮೈತ್ರಿಕೂಟದ ನಾಟಕ ಮಾಡಿದ್ದ ಭಾರತೀಯ ಕಾಂಗ್ರೆಸ್ ಲೋಕಾಸಭಾ ಚುನಾವಣೆ ಬಳಿಕ ಏಕಾಂಗಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ದಿಲ್ಲಿ, ಮಹಾರಾಷ್ಟ್ರ, ಕಾಶ್ಮೀರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ಕಡೆ ಕಾಂಗ್ರೆಸ್‌ಅನಾಥವಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವದ ವಿರುದ್ಧ ಇಂಡಿ ಮೈತ್ರಿಕೂಟ ಅಸಮಾಧಾನಗೊಂಡಿದೆ.
ಕಾಂಗ್ರೆಸ್‌ಸಹವಾಸದಿಂದ ಲೋಕಾಸಭಾ ಚುನಾವಣೆಯಲ್ಲಿ ಇಂಡಿ ಮೈತ್ರಿಕೂಟದ ಪಕ್ಷಗಳಿಗೆ ಹೀನಾಯ ಸೋಲಾಗಿದೆ. ಹೀಗಾಗಿ ಸ್ಥಳೀಯ ಚುನಾವಣೆಯಲ್ಲೂ ಕಾಂಗ್ರೆಸ್‌ಜೊತೆ ಸೇರಿಕೊಂಡರೆ ಮೂಲೆಗುಂಪು ಆಗುವ ಭಯದಲ್ಲಿ ಇಂಡಿ ಕೂಟ ಛಿದ್ರವಾಗಿದೆ ಎಂದು ಬಿಜೆಪಿ ತಿಳಿಸಿದೆ.