ಗ್ಯಾರಂಟಿ ಲೂಟಿ ಹಣದಲ್ಲಿ ಮತದಾರರಿಗೆ ರೇಷನ್‌ಕಿಟ್‌ ಹಂಚುತ್ತಿರುವ ಕಾಂಗ್ರೆಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್‌ಸರ್ಕಾರ ಗ್ಯಾರಂಟಿ ಹೆಸರಲ್ಲಿ ಕೊಳ್ಳೆಹೊಡೆದಿರುವ ದುಡ್ಡನ್ನು ಇಟಲಿ ಮಾತೆಯ ಮಗಳನ್ನು ಗೆಲ್ಲಿಸಲು ಮತದಾರರಿಗೆ ರೇಷನ್‌ಕಿಟ್‌ಗಳನ್ನು ಹಂಚುತ್ತಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿ ಕಿಡಿ ಕಾರಿದೆ.

ಕಾಂಗ್ರೆಸ್‌ಸರ್ಕಾರದ ಪರ್ಸೆಂಟೇಜ್‌ಸಿಎಂ ಸಿದ್ದರಾಮಯ್ಯ ಹಾಗೂ ಕಲೆಕ್ಷನ್‌ಗಿರಾಕಿ ಡಿ.ಕೆ.ಶಿವಕುಮಾರ್ ಕೇರಳದ ವಯನಾಡು ಕ್ಷೇತ್ರದಲ್ಲಿ ಹೈಕಮಾಂಡ್‌ನ ಗುಲಾಮಗಿರಿಯನ್ನು ಜೋರಾಗಿಯೇ ಮಾಡುತ್ತಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

ಮೊನ್ನೆಯಷ್ಟೆ ಏರ್‌ಪೋರ್ಟ್‌ನಲ್ಲಿ  ಡಿಸಿಎಂ ಭೇಟಿಯಾಗಿದ್ದ ಹೈಕಮಾಂಡ್‌ನ ಕೇರಳದ ಏಜೆಂಟ್‌ಗೆ ದೊಡ್ಡ ಮೊತ್ತದ ಹಣ ಸಂದಾಯವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.

ವಯನಾಡಿನಲ್ಲಿ ಸ್ಪರ್ಧಿಸಿರುವ ಪ್ರಿಯಾಂಕ್‌ಗಾಂಧಿ ಅವರನ್ನು ಗೆಲ್ಲಿಸಲು ಕರ್ನಾಟಕದ ಜನರ ತೆರಿಗೆ ಹಣವನ್ನು ಪರ್ಸೆಂಟೇಜ್‌ಲೆಕ್ಕದಲ್ಲಿ ಲೂಟಿಹೊಡೆದು ಕೇರಳಕ್ಕೆ ಕಳಿಸಲಾಗುತ್ತಿದೆ ಎಂದು ದೂರಿದೆ.

ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟು ಮತಕೇಳುವ ಹಕ್ಕನ್ನು ಕಳೆದುಕೊಂಡಿರುವ ಕಾಂಗ್ರೆಸ್‌ಪಕ್ಷ ವಾಮಮಾರ್ಗದಲ್ಲಿ ಚುನಾವಣೆ ಎದುರಿಸುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.

 

 

- Advertisement -  - Advertisement - 
Share This Article
error: Content is protected !!
";