ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಹೋಬಳಿ ಮೇಳೆಕೋಟೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ತೂಬಗೆರೆ ಬ್ಲಾಕ್ ಕಾಂಗ್ರೆಸಿನ ಹಿರಿಯ ಮುಖಂಡರಾದ ಚನ್ನಾಪುರ ಗ್ರಾಮದ ಚಂದ್ರಪ್ಪ( ಹೈಟೆಕ್) ಟ್ರಾಕ್ಟರ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ಚಂದ್ರಪ್ಪ ಕೃಷಿ ಜಮೀನಲ್ಲಿ ಉಳುಮೆ ಮಾಡುವ ಉದ್ದೇಶದಿಂದ ಟ್ರಾಕ್ಟರ್ ಉಳುಮೆ ಮಾಡಲು ಹೋಗಿ ಹೊಲದ ಬದು ಮೇಲಿನಿಂದ ಟ್ರಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಟ್ರಾಕ್ಟರ್ ಕೆಳಗೆ ಬಿದ್ದು ಸಾವನ್ನಪ್ಪಿರುವ ಮೃತ ಚಂದ್ರಪ್ಪ ನವರಿಗೆ ಮೂರು ಜನ ಗಂಡು ಮಕ್ಕಳಿದ್ದು ಒಬ್ಬರಿಗೆ ವಿವಾಹವಾಗಿ ಹಾಗು ಪತ್ನಿ ಮೂರು ಮಕ್ಕಳಿಂದ ಬಿಟ್ಟು ಅಗಲಿದ್ದಾರೆ ಎಂದು ತಿಳಿದು ಬಂದಿದೆ.