ಜಾತಿ ಜನಗಣತಿ ಅವೈಜ್ಞಾನಿಕವಾಗಿದೆ-ಕಾಂಗ್ರೆಸ್ ಮುಖಂಡ ರಘುಗೌಡ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಸರ್ಕಾರದ ಆಡಳಿತದಲ್ಲಿ ಜಾತಿ ಜನಗಣತಿ ಮಾಹಿತಿ ಸಂಗ್ರಹಿಸಲು ಒಂದು ಮಹತ್ವದ ವೇದಿಕೆ ಸಿದ್ಧ ಪಡಿಸಲಾಯಿತು ಆ ಒಂದು ಮಹತ್ವದ ವಿಷಯ ಉತ್ತಮವಾದುದೇ. ಈ ಜಾತಿ ಜನಗಣತಿ ಮಾಹಿತಿ ಸಂಗ್ರಹಿಸಲು ಸರ್ಕಾರ 160 ಕೋಟಿಗೂ ಹೆಚ್ಚು ಹಣವನ್ನು ವ್ಯಯ ಮಾಡಿದೆ.

ಜಾತಿ ಜನಗಣತಿ ಮಾಹಿತಿ ಸಂಗ್ರಹಿಸಲು ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಹಾಗೂ ಇನ್ನು ಇತರೇ ಇಲಾಖೆಯ ನೌಕರರನ್ನು ಬಳಸಲಾಗಿದೆ ಈ ವಿಚಾರವನ್ನು ಆ ದಿನಗಳಲ್ಲಿ ನಾನು ಅರಿತಿದ್ದೇನೆ.

ಜಾತಿ ಜನಗಣತಿ ಸಂದರ್ಭದಲ್ಲಿ ಮನೆಮನೆಗೆ ತೆರಳಿ ಮನೆಯ ಒಟ್ಟು ಸದಸ್ಯರ ಸಂಖ್ಯೆ, ಗಂಡು ಹೆಣ್ಣಿನ ಸದಸ್ಯರ ಸಂಖ್ಯೆ, ಉದ್ಯೋಗ, ವರಮಾನ ಹಾಗೂ ಜಾತಿ ವಿವರ ಪಡೆದು ಅವುಗಳನ್ನು ನೋಂದಾಯಿಸಲಾಗಿದೆ.

ಲೋಪದೋಷಗಳ ಕಾರ್ಮೋಡಗಳ ಸುಳಿಯಲ್ಲಿ ಜಾತಿ ಜನಗಣತಿ ಸಿಕ್ಕಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಸ್ವತಹ ನಾನು ಕಣ್ಣಾರೆ ಕಂಡಿದ್ದೇನೆ ಎಂಬುದನ್ನು ಈ ಸಂದರ್ಭದಲ್ಲಿ ವಿವರಿಸುತ್ತಿರುವೆ.

ಮನೆಮನೆಗೆ ಜಾತಿ ಜನಗಣತಿ ನೋಂದಾಯಿಸಲು ಬಂದವರು ಜಾತಿ ಜನಗಣತಿ ಅರ್ಜಿಯನ್ನು ತುಂಬುವ ಸಂದರ್ಭದಲ್ಲಿ ಜಾತಿ ಹೆಸರಿನ ಮುಂದೆ ಉಪಜಾತಿಗಳ ಹೆಸರನ್ನು ನೋಂದಾಯಿಸಿರುವ ವಿಚಾರ ಬೆಳಕಿಗೆ ಬಂದಿದೆ.  ಜಾತಿ ವಿಚಾರದ ಮುಂದೆ ಜಾತಿ ಹೆಸರನ್ನು ಬರೆಯಬೇಕು ಉಪ ಪಂಗಡದ ಹೆಸರು ಬರೆಯಬಾರದು.

ಈ ವಿಚಾರದಲ್ಲಿ ನೋಂದಣಿಕೆಗೆ ಬಂದವರು ತಪ್ಪು ಮಾಡುತ್ತಿದ್ದರು. ಈ ವಿಚಾರವನ್ನು ನೋಂದಣಿಕೆಗೆ ಬಂದವರಲ್ಲಿ ಮನವರಿಕೆ ಮಾಡಿದ್ದರೆ ಅವರಲ್ಲಿ ಅಸಡ್ಡೆ ಕಾಣುತ್ತಿತ್ತು. ಈ ವಿಚಾರ ಒಂದು ಕುತಂತ್ರ ಎಂಬಂತೆ ಕಂಡಿರುವ ವಿಚಾರ ನನಗೆ ಆ ಸಂದರ್ಭದಲ್ಲಿ ಅನಿಸಿದ್ದು ಸುಳ್ಳಲ್ಲ ನನ್ನಂತೆ ಲಕ್ಷಾಂತರ ಜನರಿಗೆ ಮನವರಿಕೆ ಯಾಗಿದೆ.

ಆ ದಿನಗಳಲ್ಲಿ ಈ ಸುದ್ದಿ ಸಣ್ಣದಾಗಿ ಸುದ್ದಿಯು ಆಗಿದೆ. ಈ ವಿಚಾರದಲ್ಲಿ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಪ್ರಾಂತ್ಯದಲ್ಲಿ ಹೋಬಳಿ ಮಟ್ಟದಲ್ಲಿ ಸಭೆ ಮಾಡಲು ಮುಖಂಡರಿಗೆ ಮನವಿಯನ್ನು ನಾನು ಮಾಡಿದ್ದೇನೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಆ ಸಂದರ್ಭದಲ್ಲಿ ತೇಲಿಬಂದಿದ್ದು ನಿಜ.

ರಾಜ್ಯದಲ್ಲಿ ಜಾತಿ ಜನಗಣತಿ ಪ್ರಕಾರ ಜನಸಂಖ್ಯೆ ಕ್ರೋಢೀಕರಣ ವಿಚಾರದಲ್ಲಿ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗರ ಒಕ್ಕೂಟ ವ್ಯವಸ್ಥೆ ಸೇರಿದಂತೆ ಇನ್ನು ಕೆಲವು ಜಾತಿಗಳನ್ನು ಉಪ ಪಂಗಡಗಳ ಹೆಸರಿನಲ್ಲಿ ವಿಂಗಡನೆ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

 ಈ ವಿಚಾರ ಒಡೆದು ಆಳುವ ನೀತಿ ಎಂಬಂತೆ ಕಂಡುಬರುತ್ತಿದೆ. ಈ ವಿಚಾರವನ್ನು ಜನಾಂಗದ ಸಂಘಟನೆಯ ಪದಾಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರುಗಳು ಸೇರಿದಂತೆ ಪ್ರಜ್ಞಾವಂತ ನಾಗರಿಕರ ಸಮಾಜ ಖಂಡಿಸುತ್ತಿದ್ದಾರೇ.

ಜಾತಿ ಜನಗಣತಿ ತಪ್ಪಲ್ಲ ಆದರೆ ದೊಡ್ಡ ಪ್ರಮಾಣದಲ್ಲಿರುವ ಜಾತಿಗಳನ್ನು ಉಪ ಪಂಗಡಗಳ ಹೆಸರಿನಲ್ಲಿ ವಿಂಗಡನೆ ಮಾಡಲಾಗಿರುವ ವಿಚಾರ ತಪ್ಪಾಗಿದೆ. ಈ ವಿಚಾರವನ್ನು ಸರಿಪಡಿಸಲು ಮತ್ತೊಮ್ಮೆ ಹೊಸದಾಗಿ ಜಾತಿ ಜನಗಣತಿ ಮಾಡಲು ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಗುರುವರ್ಯರುಗಳು ಸೇರಿದಂತೆ ಅನ್ಯಾಯಕ್ಕೊಳಗಾದ ಇನ್ನು ಕೆಲವು ಸಮುದಾಯದ ಮುಖಂಡತ್ವದ ಮುನ್ನೆಲೆಯಲ್ಲಿ ಹಾಗೂ ರಾಜ್ಯದ ಸಮಸ್ತ ಜನತೆಯ ಬೆಂಬಲದೊಂದಿಗೆ ಸರ್ಕಾರಕ್ಕೆ ಮನವಿ  ಮಾಡಬೇಕಿದೆ.

 ಕುಲ ಕುಲ ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆ ಏನೆಂದು ಬಲ್ಲಿರಾ ಬಲ್ಲಿರಾ ಎಂಬ ಮಹತ್ವದ ವಿಚಾರವನ್ನು ಕನಕದಾಸರು ಐದುನೂರು ವರ್ಷಗಳ ಹಿಂದೆಯೇ ಮಾನವೀಯ ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟಿರುವರು.
ಲೇಖನ-ರಘು ಗೌಡ 9916101265

 

 

 

- Advertisement -  - Advertisement -  - Advertisement - 
Share This Article
error: Content is protected !!
";