ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಟ್ರಂಕ್ ತುಂಬಿಸಿಕೊಳ್ಳಲು ಹೊರಟಿರುವ ಡಿ.ಕೆ ಶಿವಕುಮಾರ್ ಅವರೇ, ಕೇಳಿಸ್ಕೋಳ್ಳಿ ಎಂದು ಜೆಡಿಎಸ್ ಟೀಕಿಸಿದೆ.
ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ 5% ವಸೂಲಿಗೆ ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಜೆಡಿಎಸ್ ಟಾಂಗ್ ನೀಡಿದೆ.
ವರ್ಷದ ಹಿಂದಷ್ಟೇ ಸರ್ಕಾರ ಗೈಡ್ ಲೈನ್ಸ್ ವಾಲ್ಯೂ ಹೆಚ್ಚಳ ಮಾಡಿದ್ದು, ಈಗ ಖಾತೆ ಪರಿವರ್ತನೆಗೆ 5% ವಸೂಲಿ ಜನ ವಿರೋಧಿ ನಡೆಯಲ್ಲದೇ ಮತ್ತೇನು! ಸಣ್ಣ ಸೈಟ್ ಹೊಂದಿರುವವರು 5 ಲಕ್ಷ ರೂ. ಕಟ್ಟಲು ಸಾಧ್ಯವೇ ?
ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಹೆಸರಲ್ಲಿ ಬಡವರ ಸುಲಿಗೆ ಮಾಡುವ ಕಾರ್ಯಕ್ರಮ ಎಂದು ಕಾಂಗ್ರೆಸ್ಸಿಗರೇ ಛೀಮಾರಿ ಹಾಕುತ್ತಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಈ 5% ಹಗಲು ದರೋಡೆ ಕೈ ಬಿಟ್ಟು, ಅದಷ್ಟು ಕಡಿಮೆ ಮಾಡಿ ಬಡ ಜನರ ಬದುಕಿಗೆ ಆಸರೆಯಾಗಿ ಎಂದು ಜೆಡಿಎಸ್ ತಾಕೀತು ಮಾಡಿದೆ.

