ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಪರೇಷನ್ ಸಿಂಧೂರ್ ಯಶಸ್ವಿ ಕಾರ್ಯಾಚರಣೆ ಬಳಿಕ ಸಿದ್ದರಾಮಯ್ಯ ಇದೀಗ ಕದನದ ರಣೋತ್ಸವ ತೋರುತ್ತಿದ್ದಾರೆ. ಕದನ ಆರಂಭವಾದಾಗ ಶಾಂತಿ ಮಂತ್ರ ಜಪಿಸಿದ್ದ ಸಿದ್ದರಾಮಯ್ಯ ಇಂದು ಬಣ್ಣ ಬದಲಾಯಿಸಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಜಾಗತಿಕ ಮೆಚ್ಚುಗೆ ವ್ಯಕ್ತವಾಗಿದೆ. ಅದರೆ ಕಾಂಗ್ರೆಸ್ ನಾಯಕರು ಭಾರತೀಯ ಸೇನೆಯ ಶೌರ್ಯದ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನಿಗದಿತ ಗುರಿಯನ್ನು ಸೇನೆ ಸಾಧಿಸಿದ ಬಳಿಕವೇ ತಾತ್ಕಾಲಿಕ ವಿರಾಮವನ್ನು ತೆಗೆದುಕೊಂಡಿದ್ದು, ಇದಕ್ಕೂ ರಾಜ್ಯದ ಮುಖ್ಯಮಂತ್ರಿಗಳು ಕೊಂಕು ಮಾತನಾಡುತ್ತಿದ್ದಾರೆ.
ಮೋದಿ ಸರ್ಕಾರ ಗಡಿಯಾಚೆಗಿನ ಭಯೋತ್ಪಾದನೆಗೆ ಹೊಸತೊಂದು ಎಚ್ಚರಿಕೆಯನ್ನು ರವಾನಿಸಿದೆ. ಇನ್ನು ಗಡಿಯೊಳಗಿನ ಇಂತಹ ಊಸರವಳ್ಳಿಗಳಿಗೆ ದೇಶದ ಜನತೆ ಪಾಠ ಕಲಿಸಬೇಕಿದೆ ಎಂದು ಬಿಜೆಪಿ ಅಭಿಪ್ರಾಯ ವ್ಯಕ್ತಪಡಿಸಿದೆ.