ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ನಾಗೇಂದ್ರ ಅವರು ಶೋಷಿತ ಸಮುದಾಯಕ್ಕೆ ಸೇರಿದ 187 ಕೋಟಿ ಹಣ ಲೂಟಿ ಮಾಡಿದರು.
ಈ ಉಪಚುನಾವಣೆ ಮೂಲಕ ದ್ರೋಹ ಬಗೆದವರಿಗೆ ಗಟ್ಟಿಯಾದ ಉತ್ತರ ನಾವು ಕೊಡಬೇಕಾಗಿದೆ ಎಂದು ಬಿಜೆಪಿ ನಾಯಕ ಶ್ರೀರಾಮುಲು ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ, 2028 ರಲ್ಲಿ ಭಾರತೀಯ ಜನತಾ ಪಾರ್ಟಿಯ 150 ಸ್ಥಾನಗಳ ಗುರಿಯನ್ನು ಸಾಧಿಸುವ ಸಂಕಲ್ಪವನ್ನು ಈ ಉಪಚುನಾವಣೆಯ ಮೂಲಕ ಮಾಡೋಣ ಎಂದು ಅವರು ತಿಳಿಸಿದ್ದಾರೆ.