ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಗಲಾಟೆಯ ತೀವ್ರ ರೂಪಕ್ಕೆ ಓರ್ವ ಯುವಕ ಸಾವನ್ನಪ್ಪಿರುವ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ವಿರೋಧಿಗಳ ಗುಂಪಿನಿಂದಲೇ ಗುಂಡು ಹಾರಿಸಲಾಗಿದೆ. ಯುವಕನ ಸಾವಿಗೆ ಅವರೇ ಕಾರಣ ಎಂದು ಆರೋಪಿಸಿದ್ದಾರೆ.
ಮೃತಪಟ್ಟ ಯುವಕನ ತ್ಯಾಗವು ವಾಲ್ಮೀಕಿ ಅಜ್ಜನ ಉದ್ದೇಶಗಳಿಗಾಗಿ ಮತ್ತು ಜನಾರ್ದನ ರೆಡ್ಡಿ ರಾಜಕೀಯ ಅಂತ್ಯಕ್ಕಾಗಿ ಆಗಿದೆ. ಜನಾರ್ದನ ರೆಡ್ಡಿ ಎಂತಹ ಹೇಡಿ ಮತ್ತು ಅವರು ಯಾವ ರೀತಿಯ ಕೆಲಸಗಳನ್ನು ಮಾಡುತ್ತಾರೆ ಎಂಬುದನ್ನು ಜನರಿಗೆ ತೋರಿಸುತ್ತೇನೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಶಪಥ ಮಾಡಿದರು.

