ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷ 1952 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಬೆ ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಾ. ಅಂಬೇಡ್ಕರ್ ಅವರನ್ನು ಸೋಲಿಸಿ ಕಾಂಗ್ರೆಸ್ ಪಕ್ಷ ಅವಮಾನಿಸಿತು ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ದೂರಿದ್ದಾರೆ.
1954 ರಲ್ಲಿ ನಡೆದ ಬಾಂದ್ರಾ ಉಪಚುನಾವಣೆಯಲ್ಲೂ ಸಹ ಬಾಬಾ ಸಾಹೇಬರನ್ನು ಕಾಂಗ್ರೆಸ್ ಪಕ್ಷ ಸೋಲಿಸಿತು. ಈ ಚುನಾವಣೆಯಲ್ಲಿ ಸನ್ಮಾನ್ಯ ಜವಾಹರ್ಲಾಲ್ ನೆಹರು ಅವರು ಅಂಬೇಡ್ಕರ್ ವಿರುದ್ಧ ಪ್ರಚಾರ ಮಾಡಿದ್ದರು.
ಬಾಬಾ ಸಾಹೇಬರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಕಾಂಗ್ರೆಸ್ ನವರಲ್ಲ, ಬದಲಾಗಿ ಕಾಂಗ್ರೆಸ್ ವಿರೋಧಿಗಳಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿ ಅವರು.
ಬಾಬಾ ಸಾಹೇಬರೊಂದಿಗೆ ಅವರೊಂದಿಗೆ ಸೈದ್ಧಾಂತಿಕ ಹಾಗೂ ವೈಚಾರಿಕ ಭಿನ್ನಾಭಿಪ್ರಾಯವಿದ್ದರೂ ಸಹ ಭಾರತದ ಅಮೂಲ್ಯ ರತ್ನವನ್ನು ರಾಜ್ಯ ಸಭೆಯ ಸದಸ್ಯರಾಗಲು ಬೆಂಬಲಿಸಿ ಕಳುಹಿಸಿದ್ದು ಶ್ಯಾ.ಪ್ರ.ಮುಖರ್ಜಿ ಅವರು ಎಂದು ಮರೆಯಬಾರದು ಎಂದು ಯತ್ನಾಳ್ ತಿಳಿಸಿದ್ದಾರೆ.