ಅಲ್ಪಸಂಖ್ಯಾತರ ಅನುದಾನ ದುರ್ಬಳಕೆ-ಕಾಂಗ್ರೆಸ್ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಸಭಾ ವ್ಯಾಪ್ತಿಯಲ್ಲಿ ಮಂಜೂರಿಯಾಗಿರುವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮಂಜೂರಾಗಿರುವ ಅನುದಾನವನ್ನು ಜನರು ವಾಸವಿಲ್ಲದೆ ಇರುವ ಕಡೆ ಕಾಮಗಾರಿಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆ ಮುಂಭಾಗ ಪ್ರತಿಭಟನೆ ನೆಡೆಸಲಾಯಿತು.

 ನಗರಸಭಾ ಸದಸ್ಯ ಶಿವಶಂಕರ್ ಮಾತನಾಡಿ ತಾಲ್ಲೂಕಿನ ನಗರಸಭಾ ವ್ಯಾಪ್ತಿಯಲ್ಲಿ ಕೆ.ಆರ್.ಐ.ಡಿ.ಎಲ್. ಸಂಸ್ಥೆಯಿಂದ ಅಲ್ಪಸಂಖ್ಯಾತ ಅನುದಾನವನ್ನು ಮಂಜೂರು ಮಾಡಿರುವುದು ಸರಿಯಷ್ಟೆ. ಆದರೆ ಕಾಮಗಾರಿಗಳು ಮಾತ್ರ ಅಲ್ಪಸಂಖ್ಯಾತ ಜನ ವಾಸ ಮಾಡದೇ ಇರುವ ಸ್ಥಳಗಳಲ್ಲಿ ಕಾಮಗಾರಿಗಳು ಮಾಡುತ್ತಿದ್ದು, ಅಲ್ಪಸಂಖ್ಯಾತ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ ಎಂದು ಆರೋಪಿಸಿದರು.

 ಈ ಕಾಮಗಾರಿಗಳಿಗೆ ನಗರಸಭೆಯಿಂದ ಸಂಬಂಧಪಟ್ಟ ಗುತ್ತಿಗೆದಾರರು ಯಾವುದೇ ರೀತಿಯ ಎನ್.ಓ.ಸಿ.ಯನ್ನು ಪಡೆದುಕೊಂಡಿರುವುದಿಲ್ಲ. ಅಷ್ಟೇ ಅಲ್ಲದೇ ಈ ಅನುದಾನದಲ್ಲಿ ಮಂಜೂರು ಆಗಿರುವಂತೆ ಆಂದಾಜು ಪಟ್ಟಿಯಂತೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವುದಿಲ್ಲ ಈ ಬಗ್ಗೆ ಸಂಬಂಧಪಟ್ಟ ಸಂಸ್ಥೆಯೊಂದಿಗೆ ಚರ್ಚಿಸಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.

 ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ರಾಮಕೃಷ್ಣಯ್ಯನಗರ ಸಭಾ ಸದಸ್ಯರಾದ ಅಲ್ತಾಫ್, ರೂಪಿಣಿ ಮಂಜುನಾಥ್, ರಜನಿ ಸುಬ್ರಮಣಿ, ನಾಗಮಣಿ, ಮಂಜುಳಾ, ಚಂದ್ರಮೋಹನ್, ಆನಂದ್, ನಾಗರಾಜ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ ಪಿ ಜಗನ್ನಾಥ್, ಮುಖಂಡರಾದ ಫಯಾಜ್ ,ಅಖಿಲೇಶ್, ರಾಜಘಟ್ಟ ರವಿ, ವಿಶ್ವಾಸ್ ಗೌಡ, ಜನಪರ ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";