ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಲ್‌ಪಿಜಿ ಸಂಕಷ್ಟಕ್ಕೆ ಪರಿಹಾರ ಬೇಕು, ಕಾರಣಗಳಲ್ಲ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಎಲ್‌ಪಿಜಿ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಜನರಿಗೆ ತಕ್ಷಣದ ಪರಿಹಾರ ದೊರಕುವಂತೆ ಮೋದಿ ಸರ್ಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರಭಾ ಆಗ್ರಹಿಸಿದ್ದಾರೆ.

- Advertisement - 

ಮೋದಿ ಸರ್ಕಾರದ ಅವಧಿಯಲ್ಲಿ ಎಲ್‌ಪಿಜಿ ಗ್ಯಾಸ್ ಕೊರತೆಯಿಂದ ದೇಶವೇ ಕಂಗೆಟ್ಟಿದೆ. ಪ್ರಧಾನಿಯವರು ಟ್ರಂಪ್ ಎದುರು ಶರಣಾಗಿದ್ದರಿಂದ ಸಂಪೂರ್ಣ ದೇಶವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ.

ಪರಿಸ್ಥಿತಿ ಅತ್ಯಂತ ದುಸ್ಥಿತಿಯಲ್ಲಿದ್ದು, ಜನರು ಎಲ್‌ಪಿಜಿ ಸಿಲಿಂಡರ್ ಪಡೆಯಲು ಉದ್ದವಾದ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ.

- Advertisement - 

ಈ ಕುರಿತು ಇಂದು ಸಂಸತ್ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದರಾದ ಪ್ರಿಯಾಂಕ ಗಾಂಧಿ ಅವರೊಂದಿಗೆ ಭಾಗವಹಿಸಿ ಮೋದಿ ಸರ್ಕಾರದ ಈ ಶರಣಾಗತಿ ನೀತಿಯನ್ನು ಖಂಡಿಸಲಾಯಿತು.

ಜನರಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ, ಸರ್ಕಾರವೂ ಸಮಸ್ಯೆ ಪರಿಹರಿಸಲು ಕಾಣಿಸುತ್ತಿಲ್ಲ ಎಂದು ಡಾ.ಪ್ರಭಾ ದೂರಿದರು.

Share This Article
error: Content is protected !!
";