ಕಾಂಗ್ರೆಸ್ ಪ್ರಚೋದನೆಯೇ ಕರಾವಳಿ ಘಟನೆಗಳಿಗೆ ಕಾರಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರಾವಳಿ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ನಡೆದಾಗ ಮೌನವಾಗಿದ್ದ ಕರ್ನಾಟಕ ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದೆ. ಕರಾವಳಿಯಲ್ಲಿ ನಡೆಯುವ ಎಲ್ಲಾ ಸಂಘರ್ಷಗಳಿಗೆ ಕಾಂಗ್ರೆಸ್ ಪ್ರಚೋದನೆಯೇ ಕಾರಣ ಎಂದು ಬಿಜೆಪಿ ಆರೋಪಿಸಿದೆ.

- Advertisement - 

ಮಾನ್ಯ ಡಿ.ಕೆ ಶಿವಕುಮಾರ ಅವರೇ, ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ, ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ದಾಳಿ ನಡೆಸಿದ ಮತಾಂಧರ ಕೇಸು ವಾಪಸ್ಸು ಪಡೆದು ಮತಾಂಧರಿಗೆ ಕಾನೂನಿನ ಭಯ ಇಲ್ಲದ ಹಾಗೆ ಮಾಡಿದ್ದು ನೀವೇ ಅಲ್ವಾ?

- Advertisement - 

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ನಡೆಯುತ್ತಿದೆ‌. ಆ ಪ್ರದೇಶದಲ್ಲಿ ನಿಷೇಧಿತ ಪಿಎಫ್‌ಐ ಭಯೋತ್ಪಾದನಾ ಸಂಘಟನೆ ಭಯದ ವಾತಾವರಣ ಸೃಷ್ಟಿಸುತ್ತಿದೆ. ರಾಜ್ಯ ಸರ್ಕಾರ ಅವರನ್ನು ಹತ್ತಿಕ್ಕುವ ಬದಲು ಪೋಷಿಸುವ ಕೆಲಸ ಮಾಡುತ್ತಿದೆ. ಮುಸ್ಲಿಂ ಮತ ಬ್ಯಾಂಕ್‌ಗಾಗಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.

ಬೆಂಗಳೂರಿನ ಬಳಿಕ ಅತಿ ಹೆಚ್ಚು ತೆರಿಗೆ ಪಾವತಿಸುವ ಜಿಲ್ಲೆ ಕರಾವಳಿಯ ಅವಳಿ ಜಿಲ್ಲೆಗಳು. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದುವರಿದಿದ್ದು, ಅಲ್ಲಿನ ಮತದಾರರು ಕಾಂಗ್ರೆಸ್ ಪಕ್ಷದ ತುಷ್ಟೀಕರಣ ರಾಜಕೀಯದ ವಿರುದ್ಧ ದೃಢವಾಗಿ ನಿಂತ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆ ನಡೆಸಿ ಕರಾವಳಿಯ ಶಾಂತಿಯನ್ನು ಹಾಳುಗೆಡವುತ್ತಿದೆ‌. ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕೀಯದಿಂದ ಕರಾವಳಿಯ ನೆಮ್ಮದಿ ಹಾಳಾಗಿದೆ ಎಂದು ಬಿಜೆಪಿ ಆರೋಪಿಸಿದೆ.

- Advertisement - 

 

 

 

Share This Article
error: Content is protected !!
";