ನಗರಸಭೆ ಪೌರಾಯುಕ್ತೆ ಮೇಲೆ ಕಾಂಗ್ರೆಸ್ ರೌಡಿ ರಾಜೀವ್ ಗೌಡನ ದೌರ್ಜನ್ಯ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಶಿಡ್ಲಘಟ್ಟ:
ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾದ ಬ್ಯಾನರ್​ ತೆರವುಗೊಳಿಸಿದ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಎನ್ನುವ ಪುಡಿ ರೌಡಿಯೊಬ್ಬ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಧಮ್ಕಿ ಹಾಕಿರುವ ಘಟನೆ ಜರುಗಿದೆ.

ಪುಡಿ ಕಾಂಗ್ರೆಸ್ ರೌಡಿ ರಾಜೀವ್ ಗೌಡ ನಗರಸಭೆ ಪೌರಾಯುಕ್ತೆಗೆ ಫೋನ್ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ದಂಗೆ ಎಬ್ಬಿಸುವುದಾಗಿ ಬೆದರಿಕೆ ಹಾಕಿದ್ದಾನೆ.

- Advertisement - 

ಅಮ್ಮನ್ ಅಕ್ಕನ್ ಅಂತ ಬಾಯಿಗೆ ಬಂದಂಗೆ ಕೆಟ್ಟ ಶಬ್ಧಗಳಿಂದ ಬೈದಿದ್ದಾರೆ, ಇದರಿಂದ ನೊಂದ ಅಧಿಕಾರಿ ಅಮೃತ ಗೌಡ ಕಣ್ಣೀರಿಟ್ಟಿದ್ದಾರೆ. ಸದ್ಯ ರಾಜೀವ್ ಗೌಡ ಬೈದಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಲ್ಲದೆ ಘಟನೆ ಕುರಿತು ಮಾಧ್ಯಮಗಳ ಮುಂದೆ ಪೌರಾಯುಕ್ತೆ ಕಣ್ಣೀರು ಹಾಕಿದ್ದಾರೆ. ರಾಜೀವ್ ಗೌಡ ವರ್ತನೆ ಬಗ್ಗೆ ಅಧಿಕಾರಿಗಳ ವಯಲದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement - 

 

Share This Article
error: Content is protected !!
";