ಬಮುಲ್ ಚುನಾವಣೆ.. ಜೆಡಿಎಸ್ ಹುಸ್ಕೂರ್ ಆನಂದ್ ರವರಿಗೆ ಕಾಂಗ್ರೆಸ್ ಬೆಂಬಲ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಅಂದು ನಾವು ಮಾಡಿದ ಆ ಮೂರು ತಪ್ಪುಗಳಿಂದ ಇಂದು ನೋವು ಅನುಭವಿಸುತ್ತಿದ್ದೇವೆ. ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಸೇರ್ಪಡೆಗೊಂಡ ಬಿ.ಸಿ ಆನಂದ್ ಗೆ ಬಮೂಲ್ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು, ಮುಖಂಡರ ಒಮ್ಮತದ ಮೇರೆಗೆ ಜೆಡಿಎಸ್‌ಬೆಂಬಲಿತ ಅಭ್ಯರ್ಥಿ ಹುಸ್ಕೂರ್ ಟಿ.ಆನಂದ್ ಅವರಿಗೆ ಬಾಹ್ಯ ಬೆಂಬಲ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

- Advertisement - 

 ಜೆಡಿಎಸ್ ಜಿಲ್ಲಾ ಮತ್ತು ತಾಲ್ಲೂಕು ಘಟಕ ಪತ್ರಿಕಾ ಗೋಷ್ಠಿ ನೆಡೆಸಿ ತನ್ನ ಅಧಿಕೃತ ನಗರದ ಕಾಂಗ್ರೆಸ್  ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕರಾದ ಟಿ. ವೆಂಕಟರಮಣಯ್ಯ ಮಾತನಾಡಿ ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಪಕ್ಷದ ವರಿಷ್ಟರಾದ ಡಿಕೆ ಸುರೇಶ್, ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ ಎಚ್ ಮುನಿಯಪ್ಪ ಒಳಗೊಂಡತೆ ಹಲವು ಹಿರಿಯ ಪ್ರಮುಖರ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದೇವೆ. ಕ್ರಮ ಸಂಖ್ಯೆ 2 ಹಣ್ಣಿನ ಬುಟ್ಟಿ ಚಿನ್ಹೆ ಹೊಂದಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿ ಹುಸ್ಕೂರ್ ಟಿ ಆನಂದ್ ರವರನ್ನು ಬೆಂಬಲಿಸಿ ಹಾಲು ಉತ್ಪಾದಕರ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

- Advertisement - 

ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಟಿ ಆನಂದ್ ಮಾತನಾಡಿ ಯಾವುದೇ ಷರತ್ತು ವಿಧಿಸದೇ ನನಗೆ ಬೆಂಬಲ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ನಾನು ಅಬಾರಿಯಾಗಿದ್ದೇನೆ, ಈ ಬೆಂಬಲ ಕುರಿತು ನಮ್ಮ ಜೆಡಿಎಸ್ ಪಕ್ಷದ ವರಿಷ್ಟರ ಸಲಹೆ ಮೇರೆಗೆ ಈ ನಿರ್ಧಾರಕ್ಕೆ ಮುಂದಾಗಿದ್ದು, ಸ್ಥಳೀಯವಾಗಿ ನಮಗೆ ಬೆಂಬಲ ಸೂಚಿಸಿರುವ ಮಾಜಿ ಶಾಸಕರಿಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ  ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಕಸಬಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಪ್ಪಿ ವೆಂಕಟೇಶ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಭೈರೇಗೌಡ ನಗರ ಅಧ್ಯಕ್ಷ . ಕೆ ಪಿ.ಜಗನ್ನಾಥ ತೂಬಗೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರವಿ ಸಿದ್ಧಪ್ಪ ರಾಜ್ಯ ಪ್ರದೇಶ  ಕುರುಬ ಸಂಘದ ರಾಜ್ಯ ಖಜಾಂಚಿ ಕೆ ಎಂ.ಕೃಷ್ಣ ಮೂರ್ತಿ ಘಾಟಿ ಅಭಿವೃದ್ಧಿ ಪ್ರಾದಿಕಾರದ ಸದಸ್ಯರಾದ ರಂಗಪ್ಪ ರವಿ ಮುಖಂಡರಾದ ರಾಜಗೋಫಾಲ್ ಗೋಪಾಲ್ ನಾಯಕ್  ಲಾವಣ್ಯ ನಾಗರಾಜ್  ಕಾಂಗ್ರೇಸ್ ನ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement - 

 

Share This Article
error: Content is protected !!
";