ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಪ್ರತಿಮ ದೇಶಭಕ್ತ, ಮಹಾನ್ ಕ್ರಾಂತಿಕಾರಿ, ಶ್ರೇಷ್ಠ ಚಿಂತಕ ಶ್ರೀ ವೀರ ಸಾವರ್ಕರ್ ಅವರ ಜಯಂತಿ ಆಚರಿಸಿ ಪುಷ್ಪ ನಮನದ ಮೂಲಕ ಸ್ಮರಿಸಲಾಯಿತು.
ನಂತರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳಾದ ಅಗರ್ ವಾಲ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಲಾಯಿತು.
ಸುಳ್ಳು ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದು ಕೊಟ್ಟ ಮಾತಿನಂತೆ ನಡೆಯದೆ ಖಜಾನೆ ಬರಿದು ಮಾಡಿಕೊಂಡರೂ ಜಾಹೀರಾತುಗಳನ್ನು ನೀಡಿ ನಾಡಿನ ಜನಸಾಮಾನ್ಯರಿಗೆ ದುಬಾರಿ ಜೀವನ ಅಭಿವೃದ್ಧಿ ಶೂನ್ಯ ಆಡಳಿತದ ದೌರ್ಭಾಗ್ಯ ಕೊಟ್ಟು 2 ವರ್ಷಗಳ ಲೂಟಿ ಸಾಧನೆಗಳ ಜಾಹೀರಾತು ಸಹಿಸದೇ ವಿರೋಧ ಪಕ್ಷ ಹಾಗೂ ಮಾಧ್ಯಮಗಳ ವಿರುದ್ಧ ಕಾನೂನು ಸಮರಕ್ಕಿಳಿಯುವ ಮೂಲಕ ತುರ್ತು ಪರಿಸ್ಥಿತಿ ಹೇರಲು ಹೊರಟಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ನಿಲುವುಗಳನ್ನು ಖಂಡಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಲೆಹರ್ ಸಿಂಗ್, ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಹೆಚ್.ಪೂಂಜಾ, ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕರಾದ ಎಸ್.ಬೆಲ್ದೆಲೆ, ಶಾಸಕರಾದ ಮಾನಪ್ಪ ಡಿ ವಜ್ಜಲ್, ಡಾ. ಅವಿನಾಶ್ ಜಾಧವ್, ಡಾ. ಚಂದ್ರು ಲಮಾಣಿ, ಕೃಷ್ಣ ನಾಯಕ್ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.