ಬಂಜಾರ ಸಮಾಜ ಟಾರ್ಗೆಟ್ ಮಾಡಿದ ಕಾಂಗ್ರೆಸ್ -ವಿಜಯೇಂದ್ರ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ಬಂಜಾರ ಸಮಾಜವನ್ನು ಟಾರ್ಗೆಟ್ ಮಾಡಿದೆ. ಬಂಜಾರ ಸಮಾಜ ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿರುವುದು ಕಾಂಗ್ರೆಸ್​ಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಶಾಸಕ ಚಂದ್ರು ಲಮಾಣಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಂಜಾರ ಸಮಾಜವನ್ನೇ ಟಾರ್ಗೆಟ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ಬಂಜಾರ ಸಮಾಜಕ್ಕೆ ಅನ್ಯಾಯವಾಗಿದೆ. ಆ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದರು.

- Advertisement - 

ಡಿಸಿಎಂ ಅವರು ಬಂಜಾರ ಕಾರ್ಯಕ್ರಮಕ್ಕೆ ಬಂದಾಗ ಸಹಜವಾಗಿ ಆ ಸಮಾಜದ ಯುವಕರು ಅವರು ಘೇರಾವ್ ಹಾಕಿ ಪ್ರತಿಭಟನೆ ಮಾಡಿದ್ರು. ಇದನ್ನು ಸಹಿಸದ ಡಿಸಿಎಂ ಓಡಿ ಹೋಗುವುದರ ಜೊತೆಗೆ ಘೋಷಣೆ ಕೂಗಿದ ಯುವಕರ ಮೇಲೆ ಎಫ್ಐಆರ್ ಹಾಕಿದ್ದಾರೆ. ಹಾಗಾಗಿ ಆ ಸಮಾಜವನ್ನು ಕಾಂಗ್ರೆಸ್ ಈಗ ಟಾರ್ಗೆಟ್ ಮಾಡಿದೆ. ನಮ್ಮ ಶಾಸಕ ಚಂದ್ರು ಲಮಾಣಿ ಅವರು ಕೋರ್ಟಲ್ಲಿ ವಿಚಾರಣೆ ಎದುರಿಸುತ್ತಾರೆ. ಈಗಾಗಲೇ ಅನೇಕ ಆಡಿಯೋ ಲೀಕ್ ಆಗಿದೆ. ಅದರ ಸತ್ಯಾಸತ್ಯತೆ ಹೊರಬರಬೇಕು ಎಂದು ವಿಜಯೇಂದ್ರ ಹೇಳಿದರು.

ನೋಟಿಸ್ ನೀಡಲು ನಿರ್ಧಾರ:
ಲೋಕಾಯುಕ್ತ ಅಧಿಕಾರಿಗಳು ಶಾಸಕ ಚಂದ್ರು ಲಮಾಣಿ ಅವರನ್ನು ಟ್ರ್ಯಾಪ್ ಮಾಡಿರುವ ವಿಚಾರವಾಗಿ ವಿಧಾನಸೌಧದಲ್ಲಿ ವಿಜಯೇಂದ್ರ ಚರ್ಚೆ ನಡೆಸಿದರು. ಲಮಾಣಿಗೆ ನೋಟಿಸ್ ಕೊಡಲು ತೀರ್ಮಾನಿಸಿದ್ದು
, ವಿವರಣೆ ಕೊಟ್ಟ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದಿದ್ದಾರೆ.

- Advertisement - 

ಸಿಎಂ, ಡಿಸಿಎಂ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡೋ ಯೋಗ್ಯತೆ ಇದೆಯಾ?. ಸರ್ಕಾರ ಬಂದ ಕೂಡಲೇ ವಾಲ್ಮೀಕಿ ಹಗರಣ, ಮುಡಾ ಹಗರಣ ನಡೆದಿದೆ. ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಸಿಕೊಂಡಿಲ್ಲವಾ?. ಪ್ರಿಯಾಂಕ್ ಖರ್ಗೆ ನಮಗೆ ಭ್ರಷ್ಟಾಚಾರದ ಬಗ್ಗೆ ಹೇಳ್ತಾರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆಯಂತೆ ಆಗಿದೆ. ನಾವು ಭ್ರಷ್ಟಾಚಾರಕ್ಕೆ ಜಾತಿ ಲೇಪನ ಹಾಕಲ್ಲ. ಸತ್ಯಾಸತ್ಯತೆ ಹೊರಗೆ ಬರಲಿ, ತನಿಖೆ ಆಗಲಿ ಎಂದು ವಿಜಯೇಂದ್ರ ಹೇಳಿದರು.

ಸಿದ್ದರಾಮಯ್ಯ ಅವರಿಗೆ ಬಿಜೆಪಿ ಮೇಲೆ ಸಿಟ್ಟು ಇಲ್ಲ. ಆದರೆ, ಅವರ ಕೋಪ ಅವರ ಪಕ್ಷದಲ್ಲಿ ಇರುವವರ ಮೇಲೆ ಇದೆ. ಕುರಿ ಕಾಯೋರು ಸಿಎಂ‌ಆಗಿದ್ದಾರೆ ಸಂತೋಷ. ಆದ್ರೆ ಈ ಬಜೆಟ್‌ನಲ್ಲಾದ್ರೂ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಿ ಅಂತ ನಾವು ಹಕ್ಕೊತ್ತಾಯ ಮಾಡ್ತಿದ್ದೇವೆ ಎಂದು ಅವರು ತಿಳಿಸಿದರು.

Share This Article
error: Content is protected !!
";