ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಐ ಸಮ್ಮಿಟ್ ನಲ್ಲಿ ಭಾರತದ ಮರ್ಯಾದೆ ಹಾಳು ಮಾಡಲು ಬಂದ ಕಾಂಗ್ರೆಸ್ಸಿಗರಿಗೆ ಸಾರ್ವಜನಿಕರೇ ಬೂಟುಕಾಲಲ್ಲಿ ಒದ್ದು ಆಚೆ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಕಾಂಗ್ರೆಸ್ಸಿನ ಗೂಂಡಾಗಿರಿ ರಾಜ್ಯದಲ್ಲೂ ಮಿತಿಮೀರಿದೆ ಇದನ್ನು ನೋಡಿ ಕನ್ನಡಿಗರು ಸುಮ್ಮನೆ ಕೂರುವವರಲ್ಲ ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಒದ್ದು ಓಡಿಸುವ ಕಾಲ ದೂರವಿಲ್ಲ ಎಂದು ರಾಹುಲ್ ಗಾಂಧಿ ಅವರಿಗೆ ಅಶೋಕ್ ಎಚ್ಚರಿಸಿದ್ದಾರೆ.

