ಜೆಡಿಎಸ್ ಸಂಸದರ ಮೇಲೆ ಗೂಂಡಾಗಿರಿ ಎಸಗಿದ ಕಾಂಗ್ರೆಸ್ಸಿಗರು

News Desk

ಚಂದ್ರವಳ್ಳಿ ನ್ಯೂಸ್,  ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ದ್ವೇಷ‌ರಾಜಕಾರಣಕ್ಕೆ ಧಿಕ್ಕಾರ ! ಎಂದು ಜೆಡಿಎಸ್ ಹರಿಹಾಯ್ದಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿ ಮಂಜೂರಾದ ಕಾಮಗಾರಿ ಉದ್ಘಾಟನೆ ವೇಳೆ ಕರ್ನಾಟಕ ಕಾಂಗ್ರೆಸ್   ಗೂಂಡಾಗಿರಿ ! ಮಾಡಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

ಚಿಂತಾಮಣಿಯಲ್ಲಿ ನಿರ್ಮಾಣವಾಗಲಿರುವ 50 ಹಾಸಿಗೆಗಳ ತೀವ್ರ ನಿಗಾ ಆರೈಕೆ ಘಟಕ ಕಟ್ಟಡದ ಶಂಕುಸ್ಥಾಪನೆ ವೇಳೆ ಆಗಿದ್ದ ಶಿಷ್ಟಾಚಾರ ಉಲ್ಲಂಘನೆಯನ್ನು ಕೋಲಾರ ಸಂಸದರಾದ ಎಂ. ಮಲ್ಲೇಶ್ ಬಾಬು ಅವರು ಪ್ರಶ್ನಿಸಿದಕ್ಕೆಸಚಿವ ಡಾ.ಎಂ.ಸಿ ಸುಧಾಕರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ ನಡ್ಡಾ ರವರ ಫೋಟೋವನ್ನು ಹಾಕದೆ ರಾಜ್ಯ ಕಾಂಗ್ರೆಸ್ ಸರ್ಕಾರ ಶಿಷ್ಟಾಚಾರದ ನಿಯಮ ಉಲ್ಲಂಘಿಸಿದೆ.

ಕೇಂದ್ರ ಸರ್ಕಾರದ ಯೋಜನೆಯಡಿ ಅನುದಾನ ಪಡೆದು, ಕೇವಲ ಕಾಂಗ್ರೆಸ್‌ಕಾರ್ಯಕ್ರಮ ಎಂದು ಬಿಂಬಿಸಿಕೊಂಡು ಕಾಂಗ್ರೆಸ್ ಜಾತ್ರೆ ನಡೆಸಿದ್ದಾರೆ ಲಜ್ಜೆಗೆಟ್ಟ ಕಾಂಗ್ರೆಸ್ಸಿಗರು ಎಂದು ಜೆಡಿಎಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

 

 

Share This Article
error: Content is protected !!
";