ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ಅತಿಯಾದ ಫೋಟೊ ಹುಚ್ಚು ಹಾಗೂ ಅವ್ಯವಸ್ಥೆಯ ಆಯೋಜನೆಯಿಂದ 11 ಜನ ಪ್ರಾಣ ತೆತ್ತಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.
ಇಷ್ಟೆಲ್ಲಾ ಸಾವು-ನೋವು ಸಂಭವಿಸಿದರೂ ಕಾಂಗ್ರೆಸ್ಸಿಗರ ಅಸಡ್ಡೆ ಹಾಗೂ ದುರಹಂಕಾರ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ.
ಕ್ರಿಕೆಟ್ ಸಂಸ್ಥೆಯವರು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರೆ, ಅಭಿನಂದನಾ ಸಮಾರಂಭಕ್ಕೆ ಭಾಗಿಯಾಗಿ ಎಂದು ಸಿಎಂ ಸಿದ್ದರಾಮಯ್ಯ ಅವರೆ ಆಹ್ವಾನ ನೀಡಿ, ಇಂದು ಅದಕ್ಕೂ ಹಾಗೂ ತಮಗು ಸಂಬಂಧವಿಲ್ಲ ಎಂದು ಹೇಳುತ್ತಿರುವುದು ಅವರ ದುರಹಂಕಾರದ ಪರಿ..!! ಎಂದು ಬಿಜೆಪಿ ಟೀಕಿಸಿದೆ.
ಕಾಲ್ತುಳಿತ ಸಂಭವಿಸಿದ್ದು ತಿಳಿದ ನಂತರವೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ ನಡೆದ ಸಮಾರಂಭದಲ್ಲಿ ಭಾಗಿಯಾಗಿ, ಮತ್ತೊಮ್ಮೆ ಫೋಟೊ ತೆಗಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಪ್ರಕಾರ ಹೇಳುವುದಾದರೆ ಡಿ.ಕೆ.ಶಿವಕುಮಾರ್ ಸರ್ಕಾರದ ಭಾಗವಲ್ಲವೇ? ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು ಸ್ವಲ್ಪ ಜವಾಬ್ದಾರಿಯುತವಾಗಿ ಮಾತನಾಡಬೇಕು. ಈ ರೀತಿ ಬೇಜವಾಬ್ದಾರಿಯಾಗಿ ಮಾತನಾಡುವುದು ನಾಚಿಕೆಗೇಡು ಎಂದು ಬಿಜೆಪಿ ಹರಿಹಾಯ್ದಿದೆ.