ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನರೇಗಾ ಹಣಕ್ಕೆ “ಕಾಂಗ್ರೆಸ್ ಬೃಹನ್ನಳೆ ವೇಷ” ಸಚಿವ ಪ್ರಿಯಾಂಕ್ ಖರ್ಗೆ ಅವರೇ ನರೇಗಾ ಹಗರಣದ ತೆರೆಯ ಹಿಂದಿನ ಸೂತ್ರದಾರರು ಯಾರು ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ನರೇಗಾ ಯೋಜನೆಯಲ್ಲಿ ಗಂಡಸರಿಗೆ ಸೀರೆ ಉಡಿಸಿ ಮಹಿಳೆಯರಂತೆ, ಫೋಟೋ ಆಪ್‌ಲೋಡ್ ಮಾಡಿ ಕೋಟಿ ಕೋಟಿ ಕಬಳಿಸಲಾಗಿದೆ. ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಕಲಿ ಜಾಬ್ ಕಾರ್ಡ್, ದಾಖಲೆಗಳನ್ನು ಸೃಷ್ಟಿಸಿರುವ ನಾಟಕ” ಸಿದ್ದರಾಮಯ್ಯ ಸರ್ಕಾರದ ಮಾನ ಹರಾಜು ಹಾಕಿದೆ.
ಕರ್ನಾಟಕ ರಾಜ್ಯ ಕಂಡ ಭ್ರಷ್ಟಾತೀ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಣಕ್ಕಾಗಿ ಇಷ್ಟು ನೀಚಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡು ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.