ದಲಿತರ ಅನುದಾನಕ್ಕೆ ಕಾಂಗ್ರೆಸ್‌ ಕನ್ನ: ಜೆಡಿಎಸ್ ತೀವ್ರ ವಾಗ್ದಾಳಿ

News Desk
- Advertisement -  - Advertisement - 

​ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಸರ್ಕಾರವು ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ತನ್ನ ರಾಜಕೀಯ ಲಾಭದ
ಗ್ಯಾರಂಟಿಯೋಜನೆಗಳಿಗೆ ಅಕ್ರಮವಾಗಿ ವರ್ಗಾಯಿಸುತ್ತಿದೆ ಎಂದು ಜಾತ್ಯತೀತ ಜನತಾದಳ (ಜೆಡಿಎಸ್) ಗಂಭೀರ ಆರೋಪ ಮಾಡಿದೆ.

​ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ ಜೆಡಿಎಸ್, 2026-27ನೇ ಸಾಲಿನ ಎಸ್‌ಸಿಎಸ್‌ಪಿ-ಟಿಎಸ್‌ಪಿ (SCSP-TSP) ಅನುದಾನದಲ್ಲಿ ಬರೋಬ್ಬರಿ 14,198.93 ಕೋಟಿಗೂ ಅಧಿಕ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಳ್ಳುತ್ತಿರುವುದು ದಲಿತ ಸಮುದಾಯಕ್ಕೆ ಮಾಡಿದ “ಮಹಾದ್ರೋಹ” ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

- Advertisement - 

​ಅಂಕಿ-ಅಂಶಗಳ ಸಮರ:
ಗ್ಯಾರಂಟಿಗಳಿಗೆ ಬಲಿಯಾದ ದಲಿತರ ನಿಧಿ ​ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಏಳಿಗೆಗಾಗಿ ಮೀಸಲಾದ ನಿಧಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವ ಅಂಕಿ-ಅಂಶಗಳನ್ನು ಜೆಡಿಎಸ್ ಬಿಡುಗಡೆ ಮಾಡಿದೆ.

 

- Advertisement - 

Share This Article
error: Content is protected !!
";