ಸುಲ್ತಾನಿಪುರ ಕೆರೆ ಬಾಗಿನ ಅರ್ಪಣೆ  ಮತ್ತು ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತುರುವನೂರು ಹೋಬಳಿಯ ಸುಲ್ತಾನಿಪುರ ಕೆರೆ ಕೋಡಿ ಬಿದ್ದಿದ್ದರಿಂದ ಶಾಸಕ ಟಿ.ರಘುಮೂರ್ತಿ ಕೆರೆಗೆ ಬಾಗಿನ ಅರ್ಪಣೆ ಮಾಡಿ ಮಾತನಾಡಿ ಉತ್ತಮವಾಗಿ ಮಳೆ ನಡೆಸಿದ್ದರಿಂದ ಎಲ್ಲಾ ಕೆರೆ ಕಟ್ಟೆಗಳು ತುಂಬಿರುವುದು ಸಂತಸ ತಂದಿದೆ. ನೀರು ಇದ್ದರೆ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತವೆ.

ತುರುವನೂರು ಹೋಬಳಿಯಲ್ಲಿ ಕೆರೆ ಕಟ್ಟೆಗಳ ಜೊತೆ ಅನೇಕ ಕಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಾಣಗಳನ್ನು ಸಹ ಮಾಡಿದ್ದು ಅಂತರ್ಜಲ ಹೆಚ್ಚಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ರೈತರ ಮೊಗದಲ್ಲಿ ಸಹ ಸಂತಸ ತಂದಿದ್ದು ಸೂರನಹಳ್ಳಿಯಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ ವೇಳೆ ಮುಂದಿನ ವರ್ಷ ಸಹ ಉತ್ತಮ ಮಳೆ ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಇದರ ಜೊತೆಗೆ ೨೦ ಲಕ್ಷ ವೆಚ್ಚದಲ್ಲಿ ಸುಲ್ತಾನಿಪುರ ಗ್ರಾಮದಲ್ಲಿ ಸಿಸಿ ರಸ್ತಗೆ ಹಣ ನೀಡಲಾಗಿದೆ ಎಂದರು.

 ಈ ಸಂದರ್ಭದಲ್ಲಿ ಚಳ್ಳಕೆರೆ ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಬಾಬುರೆಡ್ಡಿ, ಕ್ಷೇತ್ರ ಶಿಕ್ಷಣಧಿಕಾರಿ ಎಸ್.ನಾಗಭೂಷಣ್, ಮುದ್ದಾಪುರ ಗ್ರಾ.ಪಂ ಅಧ್ಯಕ್ಷೆ ಮಂಗಳ ಸಿದ್ದೇಶ್, ಉಪಾಧ್ಯಕ್ಷ ಸುಧಾರಾಣಿ ನಾಗರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ಓಬಳೇಶ್ ಶಾಂತಮ್ಮ, ನಾಗರಾಜ್ ಸುದಮ್ಮಮುಖಂಡರುಗಳಾದ ತಿಮ್ಮರಾಜು, ಮಹೇಶ್, ನಾಗರಾಜ್  ಮತ್ತು ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

 

 

 

- Advertisement -  - Advertisement -  - Advertisement - 
Share This Article
error: Content is protected !!
";