ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂವಿಧಾನ
ಸ್ವಾತಂತ್ರ್ಯ ಬಂದಿದೆ
ಸಮಾನತೆ ಎಲ್ಲಿದೆ
ಸಂವಿಧಾನ ಬಂದಿದೆ
ಕಾನೂನು ಎಲ್ಲಿದೆ
ಸ್ವಾತಂತ್ರ್ಯ ಸಂವಿಧಾನ
ಎಲ್ಲಿ ಜಾರಿ ಆಗಿದೆ
ದಲಿತ ಬಡವ
ಮಹಿಳೆ ಮಗು
ರೈತ ಕೂಲಿ ಕಾರ್ಮಿಕ
ಸ್ವಾತಂತ್ರ್ಯ ಎಲ್ಲಿ ಸಿಕ್ಕಿದೆ
ಸಂವಿಧಾನ ಎಲ್ಲಿ ಜಾರಿಯಾಗಿದೆ
ಅಸ್ಪೃಶ್ಯತೆ ತೊಲಗಲಿಲ್ಲ
ಅಂಧಕಾರ ಅಳಿಯಲಿಲ್ಲ
ಆಸ್ತಿ ಹಕ್ಕು ದಕ್ಕಲಿಲ್ಲ
ಅಕ್ಷರ ಎದೆಗೆ ಬೀಳಲಿಲ್ಲ
ಉದ್ಯೋಗ ಸಿಗಲಿಲ್ಲ
ಭೂಮಿ ಭಾಗ್ಯ ದೊರೆಯಲಿಲ್ಲ
ಕೂಲಿ ಬದುಕೇ ಆಯಿತಲ್ಲ
ಸಂವಿಧಾನ ಜಾರಿ ಆಗಲಿಲ್ಲ
ಸಂವಿಧಾನ ಯಾರ ಕೈಲಿ ಸಿಲುಕಿದೆ
ಸಂವಿಧಾನಕೆ ಸ್ವಾತಂತ್ರ್ಯ ಎಲ್ಲಿ ಸಿಕ್ಕಿದೆ
ದಲಿತರ ಮರಣ ಹೋಮ
ಹೆಣ್ಣುಗಳ ಅತ್ಯಚಾರ
ಕಾರ್ಮಿಕರ ಶೋಷಣೆ
ಬಾಲಕಾರ್ಮಿಕರ ಅಳು
ಅಲೆಮಾರಿಗಳ ಅಲೆದಾಟ
ಬಿಕ್ಷುಕರ ಪರದಾಟ
ಅಂತ್ಯ ಕಾಣದಾಗಿದೆ
ಸ್ವಾತಂತ್ರ್ಯ ಸಂವಿಧಾನ
ಕನಸಾಗೇ ಉಳಿದಿದೆ
ಭೂಮಾಲಿಕರ
ಅಟ್ಟಹಾಸ
ಶೋಷಕರ
ಸೊಕ್ಕಿನಾಟ
ಸಾಮ್ರಾಜ್ಯಶಾಹಿ
ಸಮರ
ನಿಲ್ಲಬೇಕೀದೆ
ಕಾಕಿ ಖಾದಿ ಕಾವಿ
ಬದ್ಧತೆ ತೋರಬೇಕಿದೆ
ದೇಶ ಕೋಶ ಉಳಿಯಬೇಕಿದೆ
ಸ್ವಾತಂತ್ರ್ಯ ಸಂವಿಧಾನ
ಜಾರಿ ಆಗಬೇಕಿದೆ
ಸ್ವಾತಂತ್ರ್ಯ ಸಂವಿಧಾನ
ಜಾರಿ ಮಾಡಬೇಕಿದೆ
ಕವಿತೆ-ಡಾ. ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ

