ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ರಾಷ್ಟ್ರೀಯ ಹೆದ್ದಾರಿ 648ರ ದಾಬಸ್ ಪೇಟೆ -ಹೊಸಕೋಟೆ ರಸ್ತೆಯಲ್ಲಿ 17 ಸ್ಕೈವಾಕ್ ನಿರ್ಮಾಣಕ್ಕೆ ಟೆಂಡರ್ ಪ್ರಸ್ತಾಪವಾಗಿದೆ, ಸುಮಾರು 27 ಕೋಟಿ ವೆಚ್ಚದಲ್ಲಿ ಸ್ಕೈವಾಕ್ ಗಳು ನಿರ್ಮಾಣವಾಗುತ್ತಿದ್ದು, ಹೆದ್ದಾರಿಯಿಂದ ಪ್ರತ್ಯೇಕವಾಗಿದ್ದ ಗ್ರಾಮಗಳ ನಡುವಿನ ಸಂಪರ್ಕ ಸ್ಕೈವಾಕ್ ಗಳಿಂದ ಸಂಪರ್ಕಿಸುವಂತಾಗಿದೆ.
ಉಪನಗರ ಹೊರವರ್ತುಲ ರಸ್ತೆ (STRR) ಯೋಜನೆಯಡಿ ದಾಬಸ್ ಪೇಟೆ-ಹೊಸಕೋಟೆ ರಸ್ತೆಯನ್ನ ನಿರ್ಮಾಣ ಮಾಡಲಾಗಿದ್ದು, ಬೆಂಗಳೂರು ನಗರದಲ್ಲಿ ವಾಹನಗಳ ದಟ್ಟನೆ ಕಡಿಮೆ ಮಾಡುವುದು ಮತ್ತು ಉಪನಗರಗಳನ್ನ ಅಭಿವೃದ್ಧಿ ಮಾಡುವ ಉದ್ದೇಶಕ್ಕಾಗಿ ಹೆದ್ದಾರಿ ಅಭಿವೃದ್ಧಿ ಮಾಡಲಾಗಿದೆ, ಈ ರಸ್ತೆ ಬೆಂಗಳೂರು-ಪುಣೆ, ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು ಚೆನ್ನೈ ಹೆದ್ದಾರಿಯನ್ನ ಸಂಪರ್ಕಿಸುವ ರಸ್ತೆಯಾಗಿದೆ.
ಹೆದ್ದಾರಿ ನಿರ್ಮಾಣವಾದ ನಂತರ ರಸ್ತೆ ಬದಿಯಲ್ಲಿನ ಸಂಪರ್ಕ ಕಡಿತವಾಗಿತ್ತು, ಗ್ರಾಮಗಳ ಬಳಿ ಹೆದ್ದಾರಿ ದಾಟಲು ಜನರು ಕಷ್ಟಪಡುವಂತ ಪರಿಸ್ಥಿತಿ ಇತ್ತು, ರಸ್ತೆ ದಾಟುವ ವೇಳೆ ಅಮಾಯಕ ಜನರು ಪ್ರಾಣ ಕಳೆದು ಕೊಳ್ಳುತ್ತಿದ್ದರು,
ಗ್ರಾಮಗಳ ಬಳಿ ಸ್ಕೈವಾಕ್ ನಿರ್ಮಾಣ ಮಾಡುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ದಾಬಸ್ -ಪೇಟೆ-ಹೊಸಕೋಟೆ ರಸ್ತೆಯಲ್ಲಿ 27 ಕೋಟಿ ವೆಚ್ಚದಲ್ಲಿ 17 ಸ್ಕೈವಾಕ್ ಗಳನ ನಿರ್ಮಾಣಕ್ಕೆ ಟೆಂಡರ್ ಪ್ರಸ್ತಾವನೆಯಾಗಿದೆ,
ಸೋಂಪುರ ಇಡೇಸ್ಟ್ರೀಯಲ್ ಏರಿಯಾ, ಮುದ್ದಲಿಂಗನಹಳ್ಳಿ, ಹುಲಿಕುಂಟೆ, ಮುಟ್ಟುಗದಹಳ್ಳಿ, ಬೋವಿಪಾಳ್ಯ, ಮಧುರನಹೊಸಹಳ್ಳಿ, ಕೆಸ್ತೂರು,ತಳವಾರ ಗೇಟ್, ಮುಶಾಶಿ, ಬೀರಸಂದ್ರ,ಚಪ್ಪರಕಲ್ಲು, ವಿಶ್ವನಾಥಪುರ, ಬೈದ್ರಾಹಳ್ಳಿ ಗೇಟ್, ಶೆಟ್ಟಿಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ರೋಡ್, ಚನ್ನಹಳ್ಳಿ ರೋಡ್, ನಲ್ಲೂರು ರೋಡ್ ಬಳಿ ಸ್ಕೈವಾಕ್ ನಿರ್ಮಾಣಕ್ಕೆ ನಿರ್ಧಾರಿಸಲಾಗಿದೆ.