ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ಸಿ.ಎನ್ ಮಾಳಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿರುವುದನ್ನು ಕಾಮಗಾರಿಯನ್ನು ಶೀಘ್ರವೇ ಮುಗಿಸುವಂತೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ತಾಲೂಕು ಅಧ್ಯಕ್ಷ ಪರಮೇಶ್ ಒತ್ತಾಯಿಸಿದ್ದಾರೆ.
ನೆಲಕ್ಕೆ ಟೈಲ್ಸ್ ಅಳವಡಿಕೆ ಮಾಡದೆ, ಗೋಡೆಗೆ ಬಣ್ಣ ಬಳಿಯದೆ ಕಬ್ಬಿಣದ ಕಿಟಕಿ ಬಾಗಿಲುಗಳಿಗೆ ಬಣ್ಣ ಮಾಡಿಸದೆ ಇರುವುದರಿಂದ ತುಕ್ಕು ಹಿಡಿಯುವ ಹಂತಕ್ಕೆ ಬಂದಿದೆ.
ನರೇಗಾ ಯೋಜನೆಯಡಿ ಮಂಜೂರಾದ ಹೈಟೆಕ್ ಶೌಚಾಲಯದ ಅಂದಾಜು ಕಾಮಗಾರಿ ಪ್ರಾರಂಭ ದಿನಾಂಕ ನಮೂದಿಸಿಲ್ಲ. ಕಾಮಗಾರಿ ಮುಗಿದ ದಿನಾಂಕ ನಮೂದಿಸದೆ ತರಾತುರಿಯಲ್ಲಿ ಬಿಲ್ಲು ಮಾಡಿಕೊಂಡ ಗುತ್ತಿಗೆದಾರ ಪೋನ್ ಸ್ಪೀಚ್ ಆಪ್ ಮಾಡಿಕೊಂಡಿರುವುದು ನಿಜಕ್ಕೂ ದುರ್ದೈವದ ಸಂಗತಿ.
5 ಲಕ್ಷ ಕಾಮಗಾರಿ ಇದಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳಪೆ ಗುಣ ಮಟ್ಟದ ಕೆಲಸಗಳನ್ನು ನೋಡಬಹುದಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ನೆನೆಗುದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಳಿಸಿ ವಿದ್ಯಾರ್ಥಿನಿಯರ ಬಳಕೆಗೆ ಅನುಕೂಲ ಮಾಡಿಕೊಡಬೆಕೆಂದು ಪರಮೇಶ್ ಒತ್ತಾಯಿಸಿದ್ದಾರೆ.

