ಇಟಲಿ ಮಾತೆ ಮತ್ತು ಅವರ ಮಕ್ಕಳನ್ನು ಮೆಚ್ಚಿಸಲು ಸಿದ್ದರಾಮಯ್ಯ ವಯನಾಡಿಗೆ ಮನೆಗಳ ನಿರ್ಮಾಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರುನಾಡಿಗೆ ಮಾರಿ
, ಪರ ರಾಜ್ಯಕ್ಕೆ ಉಪಕಾರಿ ! ಹೈಕಮಾಂಡ್‌ಗುಲಾಮಗಿರಿಗೆ ಮಂಡಿಯೂರಿದ ಕಾಂಗ್ರೆಸ್ ಸರ್ಕಾರ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಸಾವಿರಾರು ರಸ್ತೆಗಳು ಗುಂಡಿಬಿದ್ದು ಹಾಳಾಗಿದೆ. ರಸ್ತೆಗಳು ಅಭಿವೃದ್ಧಿ ಕಾಣದೆ ಜನರ ನರಕಯಾತೆ ಅನುಭವಿಸುತ್ತಿದ್ದಾರೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.

ಆದರೆ, ಹೈಕಮಾಂಡ್‌ಗುಲಾಮಗಿರಿ ಮಾಡುತ್ತಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಕೇರಳ ಸಂಸದರನ್ನು ಮೆಚ್ಚಿಸಲು ಕರ್ನಾಟಕದ ಬೊಕ್ಕಸ ಬರಿದುಮಾಡುತ್ತಿದ್ದಾರೆ.

ಪ್ರಿಯಾಂಕ ಗಾಂಧಿ ಸಂಸದರಾಗಿರುವ ವಯನಾಡಿನಲ್ಲಿ 100 ಮನೆಗಳನ್ನು ಕಟ್ಟಿಕೊಡಲು ಹಾಗೂ ಭೂಮಿ ಖರೀದಿಯ ವೆಚ್ಚವನ್ನೂ ಬರಿಸುವುದಾಗಿ ಕೇರಳ ಸಿಎಂಗೆ ಪತ್ರ ಬರೆದಿದ್ದಾರೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. 

ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಯನಾಡಿಗೆ ಬಂದಿರೋದು ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ. ಕೇರಳದಲ್ಲಿ ಆನೆ ದಾಳಿಗೆ ಬಲಿಯಾದರೂ ಕರ್ನಾಟಕದ ದುಡ್ಡೇ ಕೊಡಬೇಕು.

ಈಗ ವಯನಾಡಿಗೆ 100 ಮನೆ ಕೊಟ್ಟಿಕೊಡುತ್ತಿದ್ದಾರೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಎಷ್ಟೋ ಕುಟುಂಬಗಳು ಸೂರಿಲ್ಲದೇ ನಿರ್ಗತಿಕರಾಗಿದ್ದಾರೆ.

ಆದರೆ ಇಟಲಿ ಮಾತೆ ಮತ್ತು ಅವರ ಮಕ್ಕಳನ್ನು ಮೆಚ್ಚಿಸಲು ಸಿದ್ದರಾಮಯ್ಯ ನಮ್ಮ ನಾಡಿನ ತೆರಿಗೆ ಹಣ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಕಿಡಿಕಾರಿದೆ.

 

 

- Advertisement -  - Advertisement - 
Share This Article
error: Content is protected !!
";