ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಾಣ-ಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಹಾಸನ:
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ ಬಳಿ
700 ಎಕರೆ ಜಾಗವಿದ್ದು, ಅಲ್ಲಿ ಪ್ರವಾಸೋದ್ಯಮದ ಪ್ರೋತ್ಸಾಹಕ್ಕೆ ಉದ್ಯಾನವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡರವರು ಕೋರಿದ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ನೀಡಿ ಮುಖ್ಯಮಂತ್ರಿಗಳು ನೀಡಿದರು.

ಕರ್ನಾಟಕದ ಇತಿಹಾಸದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರವೇ ಕೊಟ್ಟ ಮಾತಿನಂತೆ ನಡೆದಿದೆ ಎಂದರು.
ಗ್ಯಾರಂಟಿಗಳ ಯಶಸ್ವಿ ಜಾರಿ-
ಗ್ಯಾರಂಟಿ ಯೋಜನೆಗಳನ್ನು ಜಾರಿಯಾಗಿಸಲು ಸಾಧ್ಯವಿಲ್ಲ ಎಂದು ವಿಪಕ್ಷಗಳು ದೂರಿದವು. ಆದರೆ  ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದ್ದು
, ಇದುವರೆಗೆ 108135 ಕೋಟಿ ರೂಗಳನ್ನು ವೆಚ್ಚ ಮಾಡಿದೆ. ಲೋಕಸಭೆ ಚುನಾವಣೆಯ ನಂತರ ಗ್ಯಾರಂಟಿಗಳನ್ನು ನಿಲ್ಲಿಸಲಾಗುವುದು ಎಂದು ಅರೋಪಿಸಿದರು. ಟೀಕೆಗಳು ಸಾಯುತ್ತವೆ ಆದರೆ, ನಮ್ಮ ಜನಪರ ಕಾರ್ಯಗಳು ಸದಾ ಉಳಿಯುತ್ತವೆ ಎಂದರು.

- Advertisement - 

ಎಲ್ಲರೂ ಮುಖ್ಯವಾಹಿನಿಗೆ ಬರಬೇಕು
ಸಮಸಮಾಜ ನಿರ್ಮಾಣ ಮಾಡಬೇಕು, ಜಾತಿ, ವರ್ಗ ತೊಲಗಿಸಬೇಕು, ಎಲ್ಲರಿಗೂ ಸಮಾನ ಅವಕಾಶಗಳು ಹಾಗೂ ಹಕ್ಕುಗಳನ್ನು ಕೊಡಬೇಕು ಎಂದು ಸಂವಿಧಾನ  ಹೇಳುತ್ತದೆ.    ಇದಾಗದೇ ಹೋದರೇ ದೇಶಕ್ಕೆ  ಸ್ವಾತಂತ್ರ್ಯ ದೊರಕಿರುವುದು ಸಾರ್ಥಕವಾಗುವುದಿಲ್ಲ ಎಂದರು. ರಾಜಕೀಯ ಸ್ವಾತಂತ್ರ್ಯ ಬಂದರೆ ಮಾತ್ರ ಸಾಲದು. ಅದಕ್ಕಾಗಿಯೇ ನಮ್ಮ ಸರ್ಕಾರ 5 ಗ್ಯಾರಂಟಿಗಳನ್ನು ರೂಪಿಸಿದಾಗ  ಎಲ್ಲಾ ಜಾತಿ, ಧರ್ಮಗಳ ಜನರಿಗೆ ತಲುಪುವಂತೆ ಮಾಡಿದ್ದೇವೆ.

ಎಲ್ಲರೂ ಮುಖ್ಯವಾಹಿನಿಗೆ ಬರದೇ ಹೋದರೆ ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ಸಾರ್ಥಕವಾಗುವುದಿಲ್ಲ. ಸಂವಿಧಾನ ಜಾರಿಯಾಗಿ 75 ವರ್ಷಗಳಾದರೂ ಸಮಾನತೆ ಬಂದಿಲ್ಲ. ಶ್ರೀಮಂತರು, ಶ್ರೀಮಂತರಾಗಿಯೇ ಇದ್ದಾರೆಬಡವರು ಬಡವರಾಗಿಯೇ ಉಳಿದಿದ್ದಾರೆ. ಜಾತಿ ವ್ಯವಸ್ಥೆಯ ಕಾರಣದಿಂದ ಸಮಾನತೆ ಬಂದಿಲ್ಲ. ನಮ್ಮ ಸರ್ಕಾರ ಇದನ್ನು ಮನಗಂಡು ಭಾಗ್ಯ ಯೋಜನೆಗಳನ್ನು ಹಾಗೂ ಈಗ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.

- Advertisement - 

ಗ್ಯಾರಂಟಿಗಳು ವ್ಯರ್ಥ ಎಂದವರಿಗೆ ಜನರೇ ಉತ್ತರ ಕೊಡಬೇಕು:
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಹಣ ಉಳಿತಾಯವಾಗುತ್ತಿದೆ. ಇದನ್ನು ವ್ಯರ್ಥ ಎಂದು ಕೆಲವರು ಟೀಕೆ ಮಾಡುತ್ತಿದ್ದು, ಇದಕ್ಕೆ ಜನರೇ ಉತ್ತರ ಕೊಡಬೇಕು ಎಂದರು. ಒಂದು ಲಕ್ಷ ಕೋಟಿಗೂ ಹೆಚ್ಚು ವೆಚ್ಚವನ್ನು ಗ್ಯಾರಂಟಿಗಳಿಗೆ ಕೊಡಬೇಕಾದರೆ ಸಮಾನತೆಯನ್ನು ತರಬೇಕೆಂಬ ಉದ್ದೇಶದಿಂದಲೇ  ಎಂದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನೆಸಿಕೊಂಡು ಸಮಾಜದಲ್ಲಿನ ಜಾತೀಯತೆ , ವರ್ಗ ವ್ಯವಸ್ಥೆಯನ್ನು ತೊಡೆದುಹಾಕೋಣ. ನಮ್ಮ ಸರ್ಕಾರ ದಲಿತರು, ರೈತರು, ಮಹಿಳೆಯರು, ಕಾರ್ಮಿಕರ ಪರವಾಗಿರುವ ಸರ್ಕಾರ ಎಂದರು. ಹಾಸನ ಜಿಲ್ಲೆಯಲ್ಲಿ  ಅನೇಕ ಅಭಿವೃದ್ಧಿ ಕೆಲಸಗಳಾಗಿವೆ.

ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದನ್ನು ನಾವು ಜಾರಿ ಮಾಡಿದ್ದೇವೆ ಎಂದರು.  ಇಂದು ಉದ್ಘಾಟನೆ ಮತ್ತು ಶಂಕುಸ್ಥಾಪನೆಗೊಂಡ ಯೋಜನೆಗಳು ಜನೋಪಕಾರಿಯಾಗಿವೆ. ಇನ್ನು ಮುಂದೆಯೂ ಹಾಸನ ಜಿಲ್ಲೆಗೆ ವಿಶೇಷ ಗಮನವನ್ನು ನೀಡಲಾಗುತ್ತದೆ ಎಂದರು.

Share This Article
error: Content is protected !!
";