ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದ 7ನೇ ವಾರ್ಡ್ ಕೆಂಪೇಗೌಡ ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪರಿಸರ ಉದ್ಯಾನವನ ಲೋಕಾರ್ಪಣೆ ಮಾಡಲಾಯಿತು.
ಫಾಕ್ಸ್ಕಾನ್ ಕಂಪನಿಯ ಸಿ ಎಸ್ ಆರ್ ಯೋಜನೆಯಡಿ ಸುಮಾರು 5ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಉದ್ಯಾನವನವನ್ನು ತಾಲ್ಲೂಕಿನ ಶಾಸಕ ಧೀರಜ್ ಮುನಿರಾಜು, ನಗರಸಭೆ ಪೌರಯುಕ್ತ ಕಾರ್ತಿಕೇಶ್ವರ್, ನಗರಸಭೆ ಉಪಾಧ್ಯಕ್ಷ ಮಲ್ಲೇಶ್ ಹಾಗೂ ಫಾಕ್ಸ್ಕಾನ್ ಕಂಪನಿಯ ಅಧಿಕಾರಿಗಳು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಸ್ಥಳೀಯ ಸದಸ್ಯ ಹಾಗೂ ನಗರಸಭೆ ಉಪಾಧ್ಯಕ್ಷ ಮಲ್ಲೇಶ್ ಮಾತನಾಡಿ ಸಾರ್ವಜನಿಕರಿಗೆ ಸದಾ ಉಪಯೋಗವಾಗುವ ಪರಿಸರ ಸ್ನೇಹಿ ಅತ್ಯಾದುನಿಕ ಉದ್ಯಾನವನವನ್ನು ಫಾಕ್ಸ್ಕಾನ್ ಕಂಪನಿಯ ಸಿ ಎಸ್ ಆರ್ ಯೋಜನೆಯಡಿಯಲ್ಲಿ ನಿರ್ಮಿಸಿದ್ದು ಇಂದು ಲೋಕಾರ್ಪಣೆಗೊಂಡಿದೆ.ನಮ್ಮ ತಾಲ್ಲೂಕಿನಲ್ಲಿ ಸಾಕಷ್ಟು ಕಾರ್ಖಾನೆಗಳಿದ್ದು ತಮ್ಮ ಸಿ ಎಸ್ ಆರ್ ಹಾಗೂ ಸಿ ಇ ಆರ್ ಅನುದಾನಗಳನ್ನು ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ವೇಳೆ ಸ್ಥಳೀಯ ಮುಖಂಡರು, ಫಾಕ್ಸ್ಕಾನ್ ಕಂಪನಿಯ ಆಡಳಿತ ವರ್ಗ, ಸಾರ್ವಜನಿಕರು ಹಾಜರಿದ್ದರು.

