ಆಪರೇಷನ್ ಸಿಂಧೂರ ಯಶಸ್ವಿಗಾಗಿ ಹಿಂದೂ ಮಹಾಗಣಪತಿಯ ಸಿಂಧೂರ ಮಂಟಪ ನಿರ್ಮಾಣ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರಬಂಜನ್ ತಿಳಿಸಿದರು.

ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಪೆಂಡಾಲ್ ಬಳಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುವಶಕ್ತಿಯನ್ನು ಒಗ್ಗೂಡಿಸಿ ಭಕ್ತಿಯ ಕಡೆ ತೆಗೆದುಕೊಂಡು ಹೋಗುವುದು ಶೋಭಾಯಾತ್ರೆಯ ಉದ್ದೇಶ. ಪ್ರತಿನಿತ್ಯವು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹಿಂದೂ ಮಹಾಗಣಪತಿಯನ್ನು ವೀಕ್ಷಿಸಿ ಶ್ರದ್ದಾ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಪಹಲ್ಗಾಮ್‌ನಲ್ಲಿ ಉಗ್ರರು ೨೬ ಅಮಾಯಕರನ್ನು ಬಲಿ ಪಡೆದಿದ್ದಕ್ಕೆ ಪ್ರತಿಕಾರವಾಗಿ ನಮ್ಮ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿ ಆಪರೇಷನ್ ಸಿಂಧೂರ ಯಶಸ್ವಿಯಾಗಿಸಿದ್ದರ ಸ್ಮರಣೆಗಾಗಿ ಸಿಂಧೂರ ಮಂಟಪವೆಂದು ಹೆಸರಿಟ್ಟು ಸೈನಿಕರಿಗೆ ಗೌರವ ಸಮರ್ಪಿಸಿದ್ದೇವೆ. ಪ್ರಸಾದ ಮಂಟಪಕ್ಕೆ ಜ.ರಾ.ರಾಮಮೂರ್ತಿರವರ ಹೆಸರಿಟ್ಟಿದ್ದೇವೆಂದು ಹೇಳಿದರು.

- Advertisement - 

ಸುಭಾಷ್‌ಶೆಟ್ಟಿ ವೇದಿಕೆಯಲ್ಲಿ ಪ್ರತಿನಿತ್ಯವು ವಿಚಾರ ಗೋಷ್ಠಿಗಳು ನಡೆಯಲಿದೆ. ವಿಶ್ವಹಿಂದು ಪರಿಷತ್ ಜಂಟಿ ಕಾರ್ಯದರ್ಶಿ ಗೋಪಾಲ್‌ಜಿ ಆಗಮಿಸಲಿದ್ದಾರೆ. ಸೆ.೧೩ ರಂದು ಬೃಹತ್ ಶೋಭಾಯಾತ್ರೆಗೆ ಚಿತ್ರದುರ್ಗವನ್ನು ಕೇಸರಿಕರಣಗೊಳಿಸಲಾಗುವುದು. ಹಿಂದೂಗಳ ಆರಾಧ್ಯ ದೈವ ಧರ್ಮಸ್ಥಳಕ್ಕೆ ಕೆಲವರು ಕೆಟ್ಟ ಹೆಸರು ತರಲು ಅಪ ಪ್ರಚಾರದಲ್ಲಿ ತೊಡಗಿರುವುದರ ಹಿಂದೆ ದೊಡ್ಡ ಷಡ್ಯಂತರವಿದೆ. ಪಿ.ಎಫ್.ಐ. ಎಸ್.ಡಿ.ಪಿ.ಐ. ಷಡ್ಯಂತರದ ಪರವಾಗಿದೆ. ಇದು ರಾಷ್ಟ್ರೀಯ ಸುರಕ್ಷತೆಗೆ ಸವಾಲಾಗಿದೆ. ಇದರ ವಿರುದ್ದ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಪತ್ರ ಬರೆಯಲಿದ್ದೇವೆಂದರು.

ಷಡ್ಯಂತರ ನಡೆಸುತ್ತಿರುವವರನ್ನು ಕೂಡಲೆ ಬಂಧಿಸಬೇಕು. ರಾಜ್ಯ ಸರ್ಕಾರ ಶೋಭಾಯಾತ್ರೆಗೆ ಡಿ.ಜೆ. ಏಕೆ ನಿಷೇಧಿಸಬೇಕು? ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಸರ್ಕಾರ ಮತ್ತು ಅಧಿಕಾರಿಗಳು ಸಹಕರಿಸುವಂತೆ ಪ್ರಬಂಜನ್ ಮನವಿ ಮಾಡಿದರು.

- Advertisement - 

ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಷಡಾಕ್ಷರಪ್ಪ ಮಾತನಾಡಿ ಸರ್ಕಾರ ಮಾಡದ ಕೆಲಸವನ್ನು ಧರ್ಮಸ್ಥಳ ಮಾಡುತ್ತಿದೆ. ನಿರ್ಗತಿಕರಿಗೆ ವಾತ್ಸಲ್ಯ ಮನೆಗಳನ್ನು ಕಟ್ಟಿಸಿಕೊಟ್ಟು ಮಾಶಾಸನ ಕೊಡುತ್ತಿದೆ. ರಾಜ್ಯದಲ್ಲಿ ನೂರಾರು ಕೆರೆಗಳ ಹೂಳೆತ್ತಿಸಿದೆ. ಶಿಕ್ಷಕರುಗಳಿಲ್ಲದ ಶಾಲೆಗಳಿಗೆ ಶಿಕ್ಷಕರುಗಳನ್ನು ನೇಮಕ ಮಾಡಿದೆ. ಹಿಂದೂ ಧರ್ಮ ಕೇಸರಿ ಭಯೋತ್ಪಾದನೆ ಮಾಡುತ್ತಿದೆಯೆಂದು ಅಪ ಪ್ರಚಾರದಲ್ಲಿ ತೊಡಗಿರುವುದನ್ನು ನಾವುಗಳು ಖಂಡಿಸುತ್ತೇವೆಂದು ನುಡಿದರು.

ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಶರಣ್‌ಕುಮಾರ್ ಮಾತನಾಡಿ ಹದಿನೆಂಟು ಅಡಿ ಎತ್ತರದಲ್ಲಿ ವಿರಾಜಮಾನವಾಗಿರುವ ಹಿಂದೂ ಮಹಾ ಗಣಪತಿಗೆ ದಿನವೂ ವಿಶೇಷ ಪೂಜೆ ನಡೆಯಲಿದೆ. ಹೊಯ್ಸಳ ಕಾಲದ ಜೈಪುರ ಮಾದರಿಯ ಮಂಟಪ ನಿರ್ಮಿಸಲಾಗಿದೆ.

ಹದಿನೆಂಟು ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಆರತಿ ಪೂಜೆಯಿರುತ್ತದೆ. ಸೆ.೯ ರಂದು ನವದುರ್ಗಿಯರ ಆಗಮನ. ೧೦ ರಂದು ವಿಶೇಷ ಹೋಮ, ಬೈಕ್‌ರ್‍ಯಾಲಿ, ಶೋಭಾಯಾತ್ರೆ ವರ್ಷದಿಂದ ಷರ್ಷಕ್ಕೆ ಅದ್ದೂರಿಯಾಗಿ ನಡೆಯುತ್ತಿರುವುದರಿಂದ ದೇಶದಲ್ಲೇ ಎರಡನೆ ಗಣಪತಿ ಎನ್ನುವ ಕೀರ್ತಿ ಗಳಿಸಿದೆ ಎಂದರು.

ವಿಶ್ವಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.         

 

Share This Article
error: Content is protected !!
";