ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೆನೋವೊ ಜೊತೆ ಕರ್ನಾಟಕದ ಎಲೆಕ್ಟ್ರಾನಿಕ್ಸ್ ಮತ್ತು ಆರ್&ಡಿ ಪರಿಸರ ವ್ಯವಸ್ಥೆ ಬಲಪಡಿಸುವ ಕುರಿತು ಸಮಾಲೋಚನೆ ನಡೆಸಲಾಯಿತು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
Lenovo ಸಂಸ್ಥೆಯ ಉಪಾಧ್ಯಕ್ಷೆ ಶಮಾ ಪಟಾರಿ ಅವರೊಂದಿಗೆ ಕಂಪನಿಯ ಕಾರ್ಯಚಟುವಟಿಕೆಗಳ ವಿಸ್ತರಣೆ ಕುರಿತು ಫಲಪ್ರದ ಸಮಾಲೋಚನೆ ನಡೆಸಲಾಯಿತು.
ಬೆಂಗಳೂರಿನಲ್ಲಿ ಬಲಿಷ್ಠ ಆರ್&ಡಿ ಕೇಂದ್ರ ಮತ್ತು ಡಿಕ್ಸನ್ ಮುಂತಾದ ಪಾಲುದಾರರ ಮೂಲಕ ಸ್ಥಳೀಯ ಉತ್ಪಾದನಾ ವ್ಯವಸ್ಥೆ ಹೊಂದಿರುವ ಲೆನೋವೊ, ರಾಜ್ಯದ ಬೆಳವಣಿಗೆಯ ಯಶೋಗಾಥೆಯಲ್ಲಿ ಪ್ರಮುಖ ಪಾಲುದಾರರಾಗಿಯೇ ಮುಂದುವರೆದಿದೆ.
ಸಭೆಯಲ್ಲಿ ಈ ಕೆಳಗಿನ ವಿಷಯಗಳ ಕುರಿತು ಚರ್ಚಿಸಲಾಯಿತು:
ಬಿಡಿ ಭಾಗಗಳು ಮತ್ತು ಘಟಕಗಳ ಉತ್ಪಾದನೆಯನ್ನು ಉತ್ತೇಜಿಸಿ ಪೂರೈಕೆದಾರರ ಸಹಕಾರವನ್ನು ವಿಸ್ತರಿಸುವುದು.
ಉನ್ನತ ಕಾರ್ಯಕ್ಷಮತಾ ಗಣಕಯಂತ್ರ (ಹೆಚ್ ಪಿಸಿ) ಪರಿಸರ ವ್ಯವಸ್ಥೆಯ ಸಹಕಾರವನ್ನು ಗಟ್ಟಿಗೊಳಿಸುವುದು ಎಂದು ಸಚಿವರು ಹೇಳಿದರು.
ಆರ್&ಡಿ ನಾವೀನ್ಯತೆಗೆ ಸ್ಥಳೀಯ ಸ್ಟಾರ್ಟ್ಅಪ್ ಗಳೊಂದಿಗೆ ಸಂಪರ್ಕ ಹಾಗೂ ಸಹಭಾಗಿತ್ವವನ್ನು ವಿಸ್ತರಿಸುವುದು. ಜಾಗತಿಕ ಹೂಡಿಕೆ ಉದ್ದೇಶಗಳನ್ನು ಕಾರ್ಯರೂಪಕ್ಕೆ ಪರಿವರ್ತಿಸಲು ಅಗತ್ಯವಿರುವ ಸಂಪೂರ್ಣ ಬೆಂಬಲವನ್ನು ಒದಗಿಸುವುದಕ್ಕೆ ಕರ್ನಾಟಕ ಸದಾ ಬದ್ಧವಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

