ಗುತ್ತಿಗೆದಾರರು ಭಿಕ್ಷುಕರಲ್ಲ, ನೀವು ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಶಾಂತಿಯುತ ಹೋರಾಟ ಮಾಡಿ-ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಿಯೋನಿಕ್ಸ್​ ವೆಂಡರ್ಸ್​​​ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದ ವಿಚಾರವಾಗಿ ಯಾವೊಬ್ಬ
ಗುತ್ತಿಗೆದಾರರಿಗೆ ಒಂದು ವರ್ಷ ಯಾವುದೇ ಗುತ್ತಿಗೆ ಪಡೆಯಬೇಡಿ. ಕೆಲಸ ಮಾಡಬೇಡಿ. ಇವರು ಆಂಧ್ರದವರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸಲಿ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್​.ಡಿ ಕುಮಾರಸ್ವಾಮಿ ಗುತ್ತಿಗೆದಾರರಿಗೆ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು
, ರಾಜ್ಯದ ಗುತ್ತಿಗೆದಾರರಿಗೆ ಇವರು(ಕಾಂಗ್ರೆಸ್ ಸರ್ಕಾರ) ಕೆಲಸ ಕೊಡುತ್ತಿಲ್ಲ. ನೀವು ಹಿಂದಿನ ದುಡ್ಡು ಕೇಳುತ್ತಿದ್ದೀರಿ. ಶಾಂತಿಯುತವಾಗಿ ಪ್ರತಿಭಟನೆ ಮಾಡಿ. ಆತ್ಮಹತ್ಯೆಗೆ ಶರಣಾಗಬೇಡಿ, ಯಾಕೆ ದಯಮರಣಕ್ಕೆ ಪತ್ರ ಬರೆದ್ದೀರಿ? ಎಂದು ಕುಮಾರಸ್ವಾಮಿ ಪ್ರಶ್ನಿಸಿ ಧೈರ್ಯ ತುಂಬಿದರು.

ಎರಡು ಬಾರಿ ನಾನು ಮುಖ್ಯಮಂತ್ರಿಯಾದಾಗ ಯಾರಿಗೂ ತೊಂದರೆ ಕೊಟ್ಟಿಲ್ಲ. ಕಾಂಗ್ರೆಸ್​ ಸರ್ಕಾರದಲ್ಲಿ ತಪ್ಪಾಗಿದೆ. ತಪ್ಪಿನ ವಿರುದ್ಧ ಹೋರಾಟ ಮಾಡುವ ನಿರ್ಧಾರ ನಿಮ್ಮ ಕೈಯಲ್ಲಿದೆ. ನೀವೇನು ಭಿಕ್ಷುಕರಲ್ಲ ಕೆಲಸ ಮಾಡಿದ್ದೀರಿ ಕೆಲಸದ ಹಣ ಕೇಳುತ್ತಿದ್ದೀರಿ. ಕೆಲಸ ಮಾಡದೆ ಬಿಲ್ ತೆಗೆದುಕೊಂಡು ಹಣ ಹೊಡೆದ ಎಷ್ಟೋ ಜನ ಅಧಿಕಾರಿಗಳು, ಗುತ್ತಿಗೆದಾರರು ಇದ್ದಾರೆ. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ, ಯಾಕೆ ದಯಾಮರಣ ಕೇಳುತ್ತೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

- Advertisement - 

ಮುಂದುವರೆದು ಮಾತನಾಡಿದ ಕುಮಾರಸ್ವಾಮಿ, ಸಚಿವ ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಉಡಾಫೆ ಹೇಳಿಕೆಗಳನ್ನು ಬಿಡಿ. ಏನೇನು ಆಗಿದೆ ಅದನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡಿ. ಎಷ್ಟೋ ಗುತ್ತಿಗೆದಾರರು ಮನೆಯ ಹೆಣ್ಣು ಮಕ್ಕಳ ಒಡವೆಗಳನ್ನು ಬ್ಯಾಂಕ್​​ಗಳಲ್ಲಿ ಅಡ ಇಟ್ಟು ಗುತ್ತಿಗೆ ಕೆಲಸ ಮಾಡಿಸಿದ್ದಾರೆ. ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಲು ಆಗಲ್ಲ, ಬಿಡಲೂ ಆಗದ ಪರಿಸ್ಥಿತಿಯಲ್ಲಿ ಗುತ್ತಿಗೆದಾರರು ಇದ್ದು ಪರದಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಆರು ತಿಂಗಳಿಂದ ಸರ್ಕಾರ ಎಲ್ಓಸಿ ಬಿಡುಗಡೆ ಮಾಡಿಲ್ಲ. ನಿರೀಕ್ಷೆಗೆ ತಕ್ಕಂತೆ ತೆರಿಗೆ ಸಂಗ್ರಹವಾಗಿಲ್ಲ. ಮುಂದಿನ ಮೂರು ತಿಂಗಳಲ್ಲಿ 1 ಲಕ್ಷ 85 ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷೆ ಇಟ್ಟಿದ್ದರು. ಆದರೆ, ಇನ್ನು 62 ಸಾವಿರ ಕೋಟಿ ರೂ.ನಷ್ಟು ತೆರೆಗೆ ಸಂಗ್ರಹವಾಗಿಲ್ಲ, ಮೈನಸ್​ನಲ್ಲಿದ್ದಾರೆ. ಇದರ ನಡುವೆ ಸಾಲ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ  ಕೇಂದ್ರ ಸಚಿವ ಕುಮಾರಸ್ವಾಮಿ ಅವರು ವಾಗ್ದಾಳಿ ಮಾಡಿದರು.

- Advertisement - 

ಬಸ್ ದರ ಏರಿಕೆ ಮಾಡಿದ್ದಾರೆ, ಮುದ್ರಾಂಕ ದರ ಜಾಸ್ತಿ ಮಾಡಿದ್ದಾರೆ, ನೋಂದಣಿ ದರ, ವಿದ್ಯುತ್​ ಬಿಲ್​ ರೇಟ್ ಜಾಸ್ತಿ ಮಾಡಿದ್ದಾರೆ. ಪೆಟ್ರೋಲ್​-ಡೀಸೆಲ್​ನ ಸೆಸ್ ಜಾಸ್ತಿ ಮಾಡಿದ್ದೀರಿ. ಪೆಟ್ರೋಲ್, ಹಾಲಿನ​ ದರ ಕೂಡ ಏರಿಕೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಮಾಡಿದರೂ, ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿದೆ. ನಿಮ್ಮ ಆಡಳಿತ ಯಾವ ಮಟ್ಟಕ್ಕೆ ಹೋಗಿದೆ. ಇದೆಲ್ಲ ಸರಿ ಮಾಡಿಕೊಳ್ಳಿ ಎಂದು ಕುಮಾರಸ್ವಾಮಿ  ಕಿವಿ ಮಾತು ಹೇಳಿದರು.

ರಾಜ್ಯಕ್ಕೆ ಕುಮಾರಸ್ವಾಮಿ ವಾರದಲ್ಲಿ ಎರಡು ದಿನ ಬರುತ್ತಾರೆ ಹೇಳಿಕೆ ಕುರಿತು ಮಾತನಾಡಿದ ಅವರು, ಹೆಚ್​ಡಿ ಕುಮಾರಸ್ವಾಮಿ ಐದು ಸಾವಿರ ಕೋಟಿ ಕೊಡಿಸಲಿ ಎಂದು ರಸ್ತೆಯಲ್ಲಿ ಕುಳಿತು ಹೇಳಿದರೆ ಆಗುತ್ತಾ? ರಾಜ್ಯದ ಸಂಬಂಧಿಸಿದ ಮಂತ್ರಿಗಳು ನನ್ನ ಹತ್ತಿರ ಬಂದು, ನಮ್ಮ ಪರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಅಂತ ಕೇಳಿದ್ದೀರಾ? ಯಾವ ರೀತಿ  ನನ್ನ ನಡೆಸಿಕೊಂಡಿದ್ದೀರಿ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಜಾತಿ ಜನಗಣತಿ ವಿಚಾರವಾಗಿ ಮಾತನಾಡಿದ ಅವರು, ಇದು ಒಕ್ಕಲಿಗ, ಲಿಂಗಾಯತ ಈ ಎರಡು ಸಮುದಾಯಗಳ ಪ್ರಶ್ನೆಯಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷದ ನಂತರ ಸಮಾಜದ ಪರಿಸ್ಥಿತಿ ಏನಿದೆ? ಸಮಾಜದಲ್ಲಿ ಎಷ್ಟು ಜನರು ಬಡತನ ರೇಖೆಯಿಂದ ಕಳೆಗಿದ್ದಾರೆ. ಮೇಲೆ ಯಾರು ಇದ್ದಾರೆ? ತುಳಿತಕ್ಕೆ ಒಳಗಾದವರನ್ನು ಮೇಲೆ ಎತ್ತಲು ಏನು ಮಾಡಿದ್ದೀರಿ. ಮುಂದೆ ಏನು ಮಾಡುತ್ತೀರಿ ನೋಡೋಣ ಎಂದು ತಿಳಿಸಿದರು.

 

Share This Article
error: Content is protected !!
";