ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಕಳಂಕ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಕಳಂಕ, ನಮ್ಮ ಯುವ ಶಕ್ತಿಗೆ ಕಂಟಕ ಎನ್ನುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.

ನಮ್ಮ ಯುವ ಜನತೆಗೆ, ಅದರಲ್ಲೂ ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಅಗತ್ಯ ಕೌಶಲ್ಯಗಳ ತರಬೇತಿ ನೀಡಿ, ಉದ್ಯೋಗಾವಕಾಶ ಕಲ್ಪಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಆದರೆ ಈ ಕರ್ನಾಟಕ ಕಾಂಗ್ರೆಸ್ ಸರ್ಕಾರ ಯುವ ಜನತೆಗೆ ನಿರಂತರವಾಗಿ ಬೋಗಸ್ ಭರವಸೆ ನೀಡುವುದನ್ನು ಬಿಟ್ಟು ಇನ್ನೇನೂ ಮಾಡಿಲ್ಲ.

- Advertisement - 

ಉದ್ಯೋಗಮೇಳದ ಹೆಸರಿನಲ್ಲಿ ಯುವಜನತೆಗೆ ವಂಚನೆ, ಅವರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ನೀಡುವುದನ್ನು ಬಿಟ್ಟು, ಇಲಾಖೆಯೇ ಅಕ್ರಮ ಮಾರ್ಗಗಳ ಮೂಲಕ ಹಣ ವೆಚ್ಚ ಮಾಡಿ ಅವ್ಯಹಾರಗಳನ್ನು ನಡೆಸುವ ಕೌಶಲ್ಯವನ್ನು ಕಲಿತುಕೊಂಡು ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಟಕವಾಗಿ ಪರಿಣಮಿಸಿದೆ.

ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ಯುವಕ-ಯುವತಿಯರ ನಿರ್ಲಕ್ಷಿಸಿ ಅಕ್ಷಮ್ಯ ಅಪರಾಧ ಎಸಗಿದೆ. ಇದೆಲ್ಲದಕ್ಕೂ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ ಉತ್ತರಿಸಲೇಬೇಕು! ಎಂದು ವಿಜಯೇಂದ್ರ ಆಗ್ರಹ ಮಾಡಿದ್ದಾರೆ.

- Advertisement - 

 

 

 

Share This Article
error: Content is protected !!
";