ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಗರಣಗಳ ಸಿದ್ಧಹಸ್ತ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ₹15,568 ಕೋಟಿ ಮೊತ್ತದ ಬೃಹತ್‌ಹಗರಣ ಬೆಳಕಿಗೆ ಬಂದಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಇಂಧನ ಇಲಾಖೆಯಲ್ಲಿ ಸ್ಟಾರ್ಟ್ ಮೀಟರ್ ಖರೀದಿ ಮತ್ತು ಅಳವಡಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಟ ಬಯಲಾಗಿದೆ. ಬೇರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್‌ಗೆ 900 ಇದ್ರೆ, ಕರ್ನಾಟಕದಲ್ಲಿ 8510 ದರ ನಿಗದಿ ಮಾಡಿ ಹತ್ತಾರು ಸಾವಿರಾರು ಕೋಟಿ ಜೇಬಿಗೆ ಇಳಿಸಲಾಗುತ್ತಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಜಾರ್ಜ್ “ಸ್ಮಾರ್ಟ್‌ಲೂಟ”ಯಲ್ಲಿ ನಿಮ್ಮ ಕಮಿಷನ್‌ಎಷ್ಟು ? “ಕಮಿಷನ್‌ಕಾಂಗ್ರೆಸ್” ಹೈಕಮಾಂಡ್‌ಗೆ ಕೊಡುತ್ತಿರುವ ಪರ್ಸಂಟೇಜ್‌ಎಷ್ಟು ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.