ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭೀಮಾನದಿ ಪ್ರವಾಹ- ಹತ್ತಿ, ಈರುಳ್ಳಿ, ಕಬ್ಬು… ಬೆಳೆಹಾನಿ, ಸೂಕ್ತ ಪರಿಹಾರ ನೀಡುವುದಾಗಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಭರವಸೆ ನೀಡಿದರು.
ಭೀಮಾನದಿಯ ಪ್ರವಾಹಕ್ಕೆ #ಆಲಮೇಲ ತಾಲ್ಲೂಕಿನ ಕುಮಸಗಿ ಗ್ರಾಮದಲ್ಲಿ ಹತ್ತಿ, ಈರುಳ್ಳಿ, ಕಬ್ಬು, ಮುಂತಾದ ಬೆಳೆಗಳಹಾನಿಯಾಗಿದ್ದು, ರೈತರ ಸಂಕಷ್ಟ ಆಲಿಸಿ, ಸೂಕ್ತ ಪರಿಹಾರವನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಸಿಂದಗಿ ಶಾಸಕ ಅಶೋಕ್ ಮನಗೂಳಿ, ಜಿಲ್ಲಾಧಿಕಾರಿ ಡಾ. ಆನಂದ್ , ಜಿಪಂ CEO ರಿಷಿ ಆನಂದ್ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜೊತೆಗಿದ್ದರು.
ಇದೇ ಸಂದರ್ಭದಲ್ಲಿ ಸಚಿವರು ಭೀಮಾ ನದಿ ಪ್ರವಾಹದ ಹಿನ್ನೆಯಲ್ಲಿ ತೆರೆಯಲಾಗಿರುವ ಆಲಮೇಲ ತಾ. ಕುಮಸಗಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಭೀಮಾ ನದಿಯ ಪ್ರವಾಹದಿಂದ ವಿಜಯಪುರ ಜಿಲ್ಲೆಯ ಸಿಂದಗಿ ಮತ ಕ್ಷೇತ್ರದ ಆಲಮೇಲ ತಾಲ್ಲೂಕಿನ ಕುಮಸಗಿ ಗ್ರಾಮ ಸಾಕಷ್ಟು ತಲ್ಲಣಗೊಂಡಿದೆ.
ಇಲ್ಲಿನ ಶಾಲೆಯೊಂದರಲ್ಲಿ ಕಾಳಜಿಕೇಂದ್ರ ತೆರೆಯಲಾಗಿದ್ದು, ಇಲ್ಲಿ ನಿರಾಶ್ರಿತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಕುಮಸಗಿ ಗ್ರಾಮಕ್ಕೆ ಭೇಟಿನೀಡಿ, ನಿರಾಶ್ರಿತರಿಗೆ ಸಾಂತ್ವನ ಹೇಳಿದೆ. ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಎಂ.ಬಿ ಪಾಟೀಲ್ ಹೇಳಿದರು.

